ಅಪಘಾತ: ವ್ಯಕ್ತಿ ಸಾವು
ಹುಣಸೂರು: ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಬಂದ ಅಪೆ ಆಟೋ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ರಂಗಯ್ಯನ ಕೊಪ್ಪಲು ಗೇಟ್ ಬಳಿ ನಡೆದಿದೆ. ತಾಲೂಕಿನ ಸೋಮನಹಳ್ಳಿಯ ಕೃಷ್ಣ (46) ಮೃತಪಟ್ಟವರು. ಇವರಿಗೆ ಪತ್ನಿ, ಒಬ್ಬ ಮಗ ಇದ್ದಾರೆ. ಹುಣಸೂರು- ಮೈಸೂರು ಹೆದ್ದಾರಿಯ ರಂಗಯ್ಯನ ಕೊಪ್ಪಲು ಗೇಟ್ ಬಳಿ ಗುರುವಾರ ರಾತ್ರಿ 9.30ರಲ್ಲಿ ಬಿಳಿಕೆರೆಯಿಂದ ಸೋಮನಹಳ್ಳಿಗೆ ಆಪೆ ಆಟೋದಲ್ಲಿ ಬರುವ ವೇಳೆ ಕೆಟ್ಟು ನಿಂತಿದ್ದ ಸೌದೆ ತುಂಬಿದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ಪೆಟ್ಟು ತಿಂದ ಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್, ಆಟೋ ಚಾಲಕರು ಪರಾರಿಯಾಗಿದ್ದಾರೆ. ಬಿಳಿಕೆರೆ ಪಿಎಸ್ಐ ಚನ್ನೆಗೌಡ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.