ಐಟಿ ದಾಳಿ: ಒಕ್ಕಲಿಗರ ಸಂಘ ಖಂಡನೆ
ಕ.ಪ್ರ.ವಾರ್ತೆ ಹುಣಸೂರು ಜು. 19
ಕೇಂದ್ರಿಯ ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನ ಆದಿಚುಂಚನಗಿರಿ ಮಠದ ಮೇಲೆ ನಡೆಸಿರುವ ದಾಳಿಯನ್ನು ತಾಲೂಕು ಒಕ್ಕಲಿಗರ ಸಂಘ ಖಂಡಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಕ್ಕಲಿಗರ ಸಂಘದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನೂರಾರು ವರ್ಷಗಳ ಇತಿಹಾಸವುಳ್ಳ ಧಾರ್ಮಿಕ ಕೇಂದ್ರವಾಗಿದ್ದು, ಜನಪರ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಬಾಲಗಂಗಾಧರನಾಥ ಸ್ವಾಮಿಜಿ ಅವರ ನೇತೃತ್ವದಲ್ಲಿ ವೃದ್ಧಾಶ್ರಮ, ವಿಕಲಚೇತನ ಮಕ್ಕಳಿಗೆ ವಿದ್ಯಾದಾನ ಸೇರಿದಂತೆ ಸರ್ಕಾರ ಮಾಡಲಾಗದಂತ ಅನೇಕ ಜನ ಸೇವಾ ಕಾರ್ಯ ರೂಪಿಸಿ ಜನ ಸೇವೆ ಮಾಡಿದೆ. ಇಂಥ ಮಠದ ಮೇಲೆ ಕಾಣದ ಕೈಗಳು ದಾಳಿ ನಡೆಸಿರುವುದು ಖಂಡನೀಯ ಎಂದು ಆರೋಪಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಗಣೇಶಗೌಡ, ಪ್ರಧಾನ ಕಾರ್ಯದರ್ಶಿ ಟಿ. ಸುಂದರ್, ಖಜಾಂಜಿ ಎನ್.ಎಸ್. ಚಂದ್ರಶೇಖರ್, ಮುಖಂಡರಾದ ಬಾಲಕೃಷ್ಣೇಗೌಡ, ಗೋವಿಂದೆಗೌಡ, ಕಿರಂಗೂರು ಬಸವರಾಜು, ಸುರೇಶ, ಚಂದ್ರೆಗೌಡ, ಕೃಷ್ಣೇಗೌಡ, ಶ್ರೀಗೌಡ, ಜಯಣ್ಣ, ರಮೇಶ, ಜಯರಾಂ, ಅಸ್ವಾಳು ಕೆಂಪೇಗೌಡ ಇದ್ದರು.
ಐಟಿ ದಾಳಿ: 22ಕ್ಕೆ ಪ್ರತಿಭಟನೆ
ಎಚ್.ಡಿ. ಕೋಟೆ: ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳ ಮೇಲೆ ನಡೆದ ಐಟಿ ದಾಳಿ ಖಂಡಿಸಿ ತಾಲೂಕು ಒಕ್ಕಲಿಗರ ಸಂಘದಿಂದ ಜು. 22 ರಂದು ಪ್ರತಿಭಟನೆ ನಡೆಯಲಿದೆ ತಾಲೂಕು ಅಧ್ಯಕ್ಷ ಸಿ.ಎನ್. ನರಸಿಂಹೇಗೌಡ ತಿಳಿಸಿದ್ದಾರೆ.