ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೃಷಿ ಮಾಹಿತಿ ಆಂದೋಲನ

Rashmi Kasaragodu
Updated On : 20 Jul 2013, 12:32 pm

ಎಚ್.ಡಿ. ಕೋಟೆ: ಪಟ್ಟಣದ ಗುರುಭವನದಲ್ಲಿ ಜು. 20ರ ಬೆಳಗ್ಗೆ 10 ಗಂಟೆಗೆ ಕೃಷಿ ಮಾಹಿತಿ ಆಂದೋಲನ ಏರ್ಪಡಿಸಲಾಗಿದ್ದು, ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾಹಿತಿ ಪಡೆದುಕೊಳ್ಳುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ತಿಳಿಸಿದ್ದಾರೆ.
ಗ್ರಾಪಂ ಕಟ್ಟಡ ಇಂದು ಉದ್ಘಾಟನೆ
ಹುಣಸೂರು: ತಾಲೂಕಿನ ಆಸ್ಪತ್ರೆ ಕಾವಲ್ ಗ್ರಾಪಂ ಆವರಣದಲ್ಲಿ ನಿರ್ಮಿಸಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಮತ್ತು ಗ್ರಾಪಂ ಕಟ್ಟಡವನ್ನು ಜು. 20ರ ಮದ್ಯಾಹ್ನ 1ಕ್ಕೆ ಶಾಸಕ ಎಚ್.ಪಿ. ಮಂಜುನಾಥ್ ಉದ್ಘಾಟಿಸುವರು ಎಂದು ಗ್ರಾಪಂ ಅಧ್ಯಕ್ಷ ರಾಮಯ್ಯ ತಿಳಿಸಿದ್ದಾರೆ.
ಕಾಲುಜಾರಿ ವ್ಯಕ್ತಿ ಸಾವು
ಪಿರಿಯಾಪಟ್ಟಣ: ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿರುವ ಮೊಗ್ಗೆಕೆರೆಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಅದೇ ಗ್ರಾಮದ ಬಸವೇಗೌಡ (68) ಎಂಬವರು ಮೃತಪಟ್ಟಿದ್ದಾರೆ.  
ಅನ್ನಭಾಗ್ಯಕ್ಕೆ ಚಾಲನೆ
ಎಚ್.ಡಿ. ಕೋಟೆ: ಪಟ್ಟಣದ ಹುಣಸೂರು ಬೇಗೂರು ರಸ್ತೆಯ ಟಿಎಪಿಸಿಎಂಎಸ್ ರೈಸ್ ಮಿಲ್ನಲ್ಲಿ ಜು. 20ರ ಬೆಳಗ್ಗೆ 10ಕ್ಕೆ ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಗೆ ಚಾಮರಾಜನಗರ ಸಂಸದ ಆರ್. ಧ್ರುವನಾರಾಯಣ್ ಚಾಲನೆ ನೀಡುವರು. ತಾಲೂಕು ಶಾಸಕ ಎಸ್. ಚಿಕ್ಕಮಾದು, ತಾಪಂ ಅಧ್ಯಕ್ಷೆ ಲಕ್ಷ್ಮಿ ರಮೇಶ್, ಉಪಾಧ್ಯಕ್ಷ ಮಹೇಂದ್ರ ಭಾಗವಹಿಸುವರು ಎಂದು ಎಂದು ತಹಸೀಲ್ದಾರ್ ಕೃಷ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement