ಡಿಸಿಪಿಯಾಗಿ ಮಹದೇವಯ್ಯ ಅಧಿಕಾರ ಸ್ವೀಕಾರ
ಮೈಸೂರು: ನಗರದ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿಯಾಗಿ ಎಂ.ಎಂ. ಮಹದೇವಯ್ಯ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಡಿಸಿಪಿ ಕೆ.ಪಿ. ಭೀಮಯ್ಯ ಅವರು ಶುಕ್ರವಾರ ಅಧಿಕಾರ ವಹಿಸಿಕೊಟ್ಟರು. ಭೀಮಯ್ಯ ಅವರನ್ನು ಸೆಸ್ಕ್ ಜಾಗೃತ ದಳದ ಎಸ್ಪಿಯಾಗಿ ನೇಮಿಸಲಾಗಿದೆ. ಮಹದೇವಯ್ಯ ಅವರು ಈ ಹಿಂದೆ ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಇನ್ಸ್ಪೆಕ್ಟರ್, ಡಿವೈಎಸ್ಪಿ, ಸೆಸ್ಕ್ ಜಾಗೃತ ದಳದ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹದೇವಯ್ಯ ಅವರನ್ನು ವಿನಾಯಕ ನಗರ ಡಾ.ಬಿ.ಆರ್. ಅಂಬೇಡ್ಕರ್ ಹವ್ಯಾಸಿ ಕಲಾ ಸಂಘದ ಸಂಚಾಲಕ ಇ. ನಾಗರಾಜು ಅಭಿನಂದಿಸಿದ್ದಾರೆ.