ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರವಿಕುಮಾರ್ರಿಂದ ಸಲ್ಲದ ಆರೋಪ: ಸೋಮಣ್ಣ

Rashmi Kasaragodu
Updated On : 20 Jul 2013, 12:33 pm

ಕ.ಪ್ರ.ವಾರ್ತೆ   ಮೈಸೂರು   ಜು. 19
ಎಚ್.ಡಿ. ಕೋಟೆ ತಾಲೂಕು ಕಂಚಮಳ್ಳಿ ಗ್ರಾಮದ ರವಿಕುಮಾರ್ ಎಂಬವರು ತಮ್ಮ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ ಇಲ್ಲ- ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಾಪಂ ಮಾಜಿ ಸದಸ್ಯ ಕೆ.ಎಲ್. ಸೋಮಣ್ಣ ದೂರಿದ್ದಾರೆ.
ತಾವು ಈ ಹಿಂದೆ ತಾಪಂ ಸದಸ್ಯರಾಗಿದ್ದಾಗ ಜನರ ಸೇವೆ ಮಾಡಿದ್ದೇನೆ. ನನ್ನ ಪತ್ನಿ ಕಂಚಮಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ತೊಡಗಿ ಸಾರ್ವಜನಿಕರಿಗೆ ಹಾಗೂ ಬಡವರಿಗೆ ಸಹಾಯ, ಸಹಕಾರ ನೀಡುತ್ತಾ ಬಂದಿದ್ದೇವೆ. ಅದೇ ಗ್ರಾಮದ ರವಿಕುಮಾರ್ ಉ. ನಿಂಗಣ್ಣಸ್ವಾಮಿ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಇಷ್ಟು ಮಾಡಿದರೂ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇತ್ತೀಚೆಗೆ ಕೆ.ಎಂ. ರಾಜೇಶ್ ಎಂಬವರು ತೆಗೆದುಕೊಂಡಿದ್ದ ಜಮೀನಿನಲ್ಲಿ ಕೆಲಸ ಮಾಡುವಾಗ ರವಿಕುಮಾರ್ ಮತ್ತು ಮಲ್ಲೇಶ್ ಎಂಬವರು ಅತಿಕ್ರಮ ಪ್ರವೇಶ ಮಾಡಿ ರಾಜೇಶ್ ಜತೆ ಗಲಾಟೆ ನಡೆಸಿದ್ದಾರೆ. ಆಗ ರಾಜೇಶ್ಗೆ ಹಲ್ಲೆಯನ್ನೂ ನಡೆಸಿದ್ದಾರೆ. ಈ ವಿಷಯ ತಿಳಿದ ನನ್ನ ಸಹೋದರ ಶೇಖರ್ ತಕ್ಷಣ ರಾಜೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಗಲಾಟೆ ವಿಚಾರಕ್ಕೆ ನನ್ನನ್ನು ವಿನಾ ಕಾರಣ ಎಳೆದು ತರಲಾಗಿದೆ ಎಂದು ದೂರಿದರು.
ಮುಖಂಡರಾದ ಎಸ್. ಪ್ರಭು, ಮಹದೇವಪ್ಪ, ಕೆ.ಬಿ. ಶಿವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement