ವಿವಾದ ನೋವು ತಂದಿದೆ: ಉಪ್ಪಿ
ಮೈಸೂರು: 'ಬಸವಣ್ಣ' ಶೀರ್ಷಿಕೆಯಡಿ ಸೆಟ್ಟೇರಿರುವ ಚಿತ್ರವು ವಿವಾದಕ್ಕೆ ಸಿಲುಕಿರುವುದು ನೋವು ತಂದಿದೆ ಎಂದು ನಾಯಕ ಉಪೇಂದ್ರ ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣ ವೇಳೆ ಮಾತನಾಡಿ, ಚಿತ್ರಕ್ಕೆ ಗಟ್ಟಿ ಶೀರ್ಷಿಕೆ ಇಡಬೇಕು ಎಂಬ ಉದ್ದೇಶದಿಂದ 'ಬಸವಣ್ಣ' ಹೆಸರಿಟ್ಟೆವು. ಇದು ವಿವಾದಕ್ಕೆ ಗುರಿಯಾಗಬಹುದು ಎಂಬ ಮುನ್ಸೂಚನೆಯನ್ನು ನಾನು ನಿರ್ದೇಶಕರಿಗೆ ನೀಡಿದ್ದೆ. ಈಗ ಪ್ರಮಾದವಾಗಿದೆ. 'ಬಸವಣ್ಣ' ಶೀರ್ಷಿಕೆ ಬದಲಾಯಿಸಿ 'ಬ್ರಾಹ್ಮಣ' ಹೆಸರಿಡಲು ಚಿಂತಿಸಲಾಗಿದೆ. ಆದರೆ ಎರಡು ಶೀರ್ಷಿಕೆಗಳನ್ನು ಬದಲಾಯಿಸಲು ಒತ್ತಾಯಿಸಿದ್ದೇನೆ. ಈಗ ಹೆಸರಿಡಲು ಚಿಂತಿಸಿರುವ 'ಬ್ರಾಹ್ಮಣ' ಶೀರ್ಷಿಕೆಗೂ ಅನುಮತಿ ದೊರಕಿಲ್ಲ. ಈ ಹಿಂದೆ 'ಓಂ' ಚಿತ್ರ ತೆಗೆದಾಗಲೂ ಇದೇ ರೀತಿಯಾಗಿತ್ತು. ಚಿತ್ರದಲ್ಲಿ ನಾಯಕ ಗನ್, ಮಚ್ಚು ಹಿಡಿದ ತಕ್ಷಣ ಹಿಂಸೆ ಎಂದು ಪ್ರೇಕ್ಷಕರು ಅರ್ಥ ಮಾಡಿಕೊಳ್ಳಬಾರದು. ಅದು ವ್ಯವಸ್ಥೆ ವಿರುದ್ಧ ಹೋರಾಡುವ ಪ್ರತೀಕ. ಬಸವಣ್ಣನವರ ಜೀವನ ಚರಿತ್ರೆ ಇಲ್ಲ. ಹೆಸರನ್ನಷ್ಟೇ ಬಳಸಿಕೊಳ್ಳಲಾಗಿದೆ ಸ್ಪಷ್ಟಪಡಿಸಿದರು.