ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರಣಿ ಅಪಘಾತದಲ್ಲಿ ವ್ಯಕ್ತಿ ಸಾವು

Rashmi Kasaragodu
Updated On : 20 Jul 2013, 12:32 pm

ಕ.ಪ್ರ.ವಾರ್ತೆ   ಮೈಸೂರು   ಜು. 19
ಪೆಟ್ರೋಲ್ ಟ್ಯಾಂಕರ್, ಸಾರಿಗೆ ಬಸ್ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಮೃತಪಟ್ಟು 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ದುದ್ದಗೆರೆ ಬಳಿ ಶುಕ್ರವಾರ ನಡೆದಿದೆ.
ಪೆಟ್ರೋಲ್ ಟ್ಯಾಂಕರ್ನ ಚಾಲಕ ಹಾಗೂ ಕ್ಯಾತಮಾರನಹಳ್ಳಿ ನಿವಾಸಿ ರಮೇಶ್ (32) ಮೃತಪಟ್ಟವರು. ಇವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸಾರಿಗೆ ಬಸ್ ಚಾಲಕ ಮಾರುತಿ ಹಾಗೂ ನಿರ್ವಾಹಕ ವಿಜಯ್ಕುಮಾರ್, ಖಾಸಗಿ ಬಸ್ ಚಾಲಕ ತಾಜ್ ರೆಹಮಾನ್ ತೀವ್ರವಾಗಿ ಗಾಯಗೊಂಡಿದ್ದಾರೆ.
ನರಸೀಪುರ ಕಡೆಯಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಬಸ್ ಮತ್ತು ಮೈಸೂರು ಕಡೆಯಿಂದ ನರಸೀಪುರ ಕಡೆ ತೆರಳುತ್ತಿದ್ದ ಇಂಡಿಯನ್ ಆಯಿಲ್ ಕಾರ್ಪೋರೇಷನ್ಗೆ ಸೇರಿದ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮಹದೇಶ್ವರ ಹೆಸರಿನ ಖಾಸಗಿ ಬಸ್ ವೇಗವಾಗಿ ಬಂದು ಸಾರಿಗೆ ಬಸ್ಗೆ ಅಪ್ಪಳಿಸಿದೆ.
ಗಾಯಗೊಂಡ ಪ್ರಯಾಣಿಕರನ್ನು ಸಿದ್ಧಾರ್ಥನಗರದ ಮಹದೇಶ್ವರ ನರ್ಸಿಂಗ್ ಹೋಂ, ನಜರ್ಬಾದ್ನ ಗೋಪಾಲಗೌಡ ಆಸ್ಪತ್ರೆ ಮತ್ತು ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಚಿಕ್ಕಣ್ಣ, ಮಹೇಶ್, ಹೇಮಂತ್, ರಾಜಪ್ಪಸ್ವಾಮಿ, ರಂಗಯ್ಯ, ಪೂರ್ಣಿಮಾ,  ಕರಿಬಸವಯ್ಯ, ಶೋಭಾ, ರಾಚಪ್ಪ, ರಾಚಪ್ಪಾಜಿ, ಸಿದ್ದಪ್ಪಚಾರ್, ಮರುಳಯ್ಯ, ಉಮೇಶ್, ಪುಟ್ಟರಾಜು, ಕಾಂತಮ್ಮ, ಮಹದೇವಯ್ಯ, ರಮೇಶ್, ಸಿದ್ದರಾಜಯ್ಯ, ಸಿದ್ದೇಶ್ ಇತರರು ಗಾಯಗೊಂಡಿದ್ದಾರೆ.
ಕೆ.ಆರ್. ಆಸ್ಪತ್ರೆಯಲ್ಲಿ ಹೇಮಂತ್, ಮಹದೇವಮ್ಮ ಸೇರಿದಂತೆ 10 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳಕ್ಕೆ ಎಸ್ಪಿ ಅಭಿನವ್ ಖರೆ, ಗ್ರಾಮಾಂತರ ವಿಭಾಗದ ಡಿವೈಎಸ್ಪಿ ಮೋಹನ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement