ಆ.2 ರಂದು ನರ್ಮ್ ಯೋಜನೆ ಸಭೆ
ಮೈಸೂರು: ಕೇಂದ್ರ ಸರ್ಕಾರದ ನರ್ಮ್ 2ನೇ ಹಂತ ಯೋಜನೆಗಳ ಸಂಬಂಧ ಆ.2 ರಂದು ಪ್ರತಿಯೊಂದು ಇಲಾಖೆ ಮತ್ತು ತಜ್ಞರೊಂದಿಗೆ ಸಭೆ ನಡೆಸುವುದಾಗಿ ಸಂಸದ ಎಚ್. ವಿಶ್ವನಾಥ್ ಹೇಳಿದರು. ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರ್ಮ್ ಮೊದಲ ಹಂತದ ಯೋಜನೆ ಸರಿಯಾಗಿ ರೂಪಿಸಿಲ್ಲ. ದೂರದೃಷ್ಟಿ ಇಲ್ಲದ ಕಾರಣ ಕೆಲವು ಯೋಜನೆಗಳು ಕುಂಠಿತವಾಗಿವೆ. ಇದಕ್ಕೆ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಕಾರಣ. ಇದು 2ನೇ ಹಂತ ಯೋಜನೆಯಲ್ಲೂ ಆಗಬಾರದು. ಇದಕ್ಕಾಗಿ ಸಭೆ ಕರೆಯುತ್ತಿರುವುದಾಗಿ ತಿಳಿಸಿದರು.
ರಸ್ತೆಗಾಗಿ 15 ಕೋಟಿ ಬಿಡುಗಡೆ: ಚಾಮರಾಜ ಕ್ಷೇತ್ರದ ಶಾಸಕ ವಾಸು ಮಾತನಾಡಿ, ಬಿಎಂಶ್ರೀ ನಗರ ಮತ್ತು ಬನ್ನಿಮಂಟಪದ ಕೆಲವು ರಸ್ತೆಗಳ ಚಿಕ್ಕದಾಗಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಚಾರವನ್ನು ನಗರಾಭಿವೃದ್ಧಿ ಸಚಿವ ವಿನಯ್ಕುಮಾರ್ ಸೊರಕೆ ಅವರ ಗಮನಕ್ಕೆ ತರಲಾಗಿತ್ತು. ಹೀಗಾಗಿ ಚಾಮರಾಜ ಕ್ಷೇತ್ರದ ರಸ್ತೆ ನಿರ್ಮಾಣಕ್ಕೆ 6 ಕೋಟಿ ಹಾಗೂ ಎನ್.ಆರ್. ಕ್ಷೇತ್ರದ ರಸ್ತೆ ನಿರ್ಮಾಣಕ್ಕೆ 9 ಕೋಟಿ ಸೇರಿ ಒಟ್ಟು 15 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದರು.