ಕಾನೂನು ಕಾಪಾಡಲು ಪೊಲೀಸರ ಮೇಲೆ ಹೆಚ್ಚಿನ ಹೊಣೆ
ಟಿ. ನರಸೀಪುರ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಸ್. ಸುಂದರ್ರಾಜ್ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡ ಸಿಬ್ಬಂದಿ ಸನ್ಮಾನಿಸಿ ಬೀಳ್ಕೋಡುಗೆ ನೀಡಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ನಾವು ಜವಾಬ್ದಾರಿಯನ್ನರಿತು ಕಾರ್ಯನಿರ್ವಹಿಸಬೇಕು. ವರ್ಗಾವಣೆಯಾಗಿ ಹೋಗುವ ಪೊಲೀಸ್ ಠಾಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ಹಿಂದಿನ ಠಾಣೆಗೆ ಗೌರವ ಬರುತ್ತದೆ ಎಂದು ತಿಳಿಸಿದರು.
ಹಾಸನದ ಪೆನ್ವೀಸ್ ಮೊಹಲ್ಲ ಠಾಣೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ವರ್ಗಾವಣೆಯಾಗಿರುವ ನಂಜುಂಡೇಗೌಡ ಮಾತನಾಡಿದರು.
ಎಎಸ್ಐ ಆಗಿ ಬಡ್ತಿ ಪಡೆದುಕೊಂಡು ಬದನವಾಳು ಠಾಣೆಗೆ ವರ್ಗಾವಣೆಗೊಂಡ ಲೋಕೇಶ್, ಮುಖ್ಯ ಪೇದೆಗಳಾಗಿ ಬಡ್ತಿ ಪಡೆದುಕೊಂಡು ತಲಕಾಡು ಠಾಣೆಗೆ ವರ್ಗಾವಣೆಯಾದ ನಾಗೇಂದ್ರ, ಬೆಟ್ಟದಪುರ ಠಾಣೆಗೆ ವರ್ಗಾವಣೆಯಾದ ರಮೇಶ್ ಹಾಗೂ ಸಾಲಿಗ್ರಾಮ ಠಾಣೆಗೆ ವರ್ಗಾವಣೆಯಾದ ಸತ್ಯನಾರಾಯಣ ರಾವ್ ಅವರನ್ನು ಸನ್ಮಾನಿಸಿ, ಬೀಳ್ಕೂಡುಗೆ ನೀಡಲಾಯಿತು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ.ಆರ್. ಗೋಪಿಕೃಷ್ಣ, ಸಿಬ್ಬಂದಿ ಜವರಯ್ಯ, ತಿರುಮಲ್ಲೇಶ್, ರಾಜಶೇಖರ, ಮಹದೇವಯ್ಯ, ವಿನಯಕುಮಾರ್, ವೆಂಕಟೇಶ್, ಮಹೇಂದ್ರ ಇದ್ದರು.