ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚುಂಚನಕಟ್ಟೆಯಲ್ಲಿ ಬತ್ತದ ಬೀಜ ವಿತರಣೆ

Rashmi Kasaragodu
Updated On : 22 Jul 2013, 12:59 pm

ಕ.ಪ್ರ.ವಾರ್ತೆ   ಹೊಸೂರು   ಜು. 21
ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸಕಾಲದಲ್ಲಿ ಸರ್ಕಾರದ ರಿಯಾಯಿತಿ ದರದ ಬಿತ್ತನೆ ಬೀಜ ವಿತರಿಸುವುದರ ಜತೆಗೆ ವೈಜ್ಞಾನಿಕ ಸಲಹೆಗಳನ್ನು ನೀಡಿ, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ಮಾಹಿತಿ ಕೊಡಬೇಕು ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಹೇಳಿದರು.
ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆಯಲ್ಲಿ ಹೋಬಳಿಯ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ನೀಡುವ ರಿಯಾಯಿತಿ ದರದ ಬಿತ್ತನೆ ಬತ್ತದ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಅಗತ್ಯವಿರುವಷ್ಟು ಬತ್ತದ ಬೀಜ ವಿತರಿಸಲಾಗುತ್ತದೆ. ಆದ್ದರಿಂದ ರೈತರು ಆತುರಪಡದೆ ಅಗತ್ಯವಿದ್ದಷ್ಟು ಪಡೆದುಕೊಳ್ಳಿ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶಾರದಮ್ಮ, ಮಾಜಿ ಅಧ್ಯಕ್ಷ ಎಚ್.ಎನ್. ರಾಜೇಗೌಡ, ಎಚ್.ಆರ್. ಮಧುಚಂದ್ರ, ಎಚ್.ಸಿ. ಶ್ರೀನಿವಾಸ್, ಎಚ್.ಆರ್. ದಿನೇಶ್, ನಿರ್ದೇಶಕರಾದ ರಾಮೇಗೌಡ, ಜವರಯ್ಯ, ಮುಖಂಡರಾದ ಚುಂಚನಕಟ್ಟೆ ಮಧು, ಎಚ್.ಎಸ್. ಜಗದೀಶ್, ಹಳಿಯೂರು ಕೃಷ್ಣಮೂರ್ತಿ, ವ್ಯವಸ್ಥಾಪಕ ಶಿವಣ್ಣ ಮತ್ತು ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement