ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತುಳುನಾಡಿಗೆ ಸಾಂಸ್ಕೃತಿಕ ಬಿಕ್ಕಟ್ಟು: ಡಾ. ಚಿನ್ನಪ್ಪಗೌಡ

Rashmi Kasaragodu
Updated On : 22 Jul 2013, 1:00 am


ಕ.ಪ್ರ.ವಾರ್ತೆ   ಮೈಸೂರು   ಜು. 21
ತುಳುನಾಡಿಗೆ ಸಾಂಸ್ಕೃತಿಕ ಬಿಕ್ಕಟ್ಟು ಎದುರಾಗಿದೆ ಎಂದು ಮಂಗಳೂರು ವಿವಿಯ ಡಾ. ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಕೆ. ಚಿನ್ನಪ್ಪಗೌಡ ವಿಷಾದಿಸಿದರು.
ಬಿಇಎಂಎಲ್ ದಕ್ಷಿಣ ಕನ್ನಡಿಗರ ಒಕ್ಕೂಟವು ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ತುಳುನಾಡ ಸಿರಿ ಎಂಬ ತುಳು ಯಕ್ಷಗಾನ ಪ್ರದರ್ಶನದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತುಳು ಭಾಷೆ, ಯಕ್ಷಗಾನ, ಜನಪದ, ಆರಾಧನೆ ಹಾಗೂ ಕೃಷಿ ಮತ್ತು ಅಲ್ಲಿನ ವ್ಯವಹಾರಿಕ ಉದ್ಯಮ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಸಾಂಸ್ಕೃತಿಕ ಬಿಕ್ಕಟ್ಟು ಎದುರಾಗಿದೆ ಎಂದು ಹೇಳಿದರು.
ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಮಾತನಾಡಿದರು. ಲ್ಯಾಬ್‌ಲ್ಯಾಂಡ್ ಗ್ರೂಪ್ ಆಫ್ ಕಂಪನಿಯ ಅಧ್ಯಕ್ಷ ಡಾ. ಸುಧೀರ್‌ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ವಿ. ಶ್ರೀನಿವಾಸರಾವ್, ಉದ್ಯಮಿ ಜೆ.ಬಿ. ಪೂಜಾರಿ ಅತಿಥಿಗಳಾಗಿದ್ದರು. ಒಕ್ಕೂಟದ ಅಧ್ಯಕ್ಷ ವಿ. ಶಿವಕುಮಾರ್ ಹಾಗೂ ಕಾರ್ಯದರ್ಶಿ ಜಯಚಂದ್ರ ಇದ್ದರು. ಸುಧಾಕರಶೆಟ್ಟಿ ಸ್ವಾಗತಿಸಿದರು. ನಂತರ ತುಳನಾಡ ಸಿರಿ ಯಕ್ಷಗಾನ ಪ್ರದರ್ಶನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement