ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೌಕರರ ಸಂಘಕ್ಕೆ ಅವಿರೋಧ ಆಯ್ಕೆ

Rashmi Kasaragodu
Updated On : 22 Jul 2013, 12:59 pm

ಕೆ.ಆರ್. ನಗರ: ಸರ್ಕಾರಿ ನೌಕರರ ಸಂಘದ 35 ನಿರ್ದೇಶಕ ಸ್ಥಾನಗಳಿಗೆ ಜು. 22ರಂದು ನಡೆಯುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಮಂಗಳವಾರ, 20 ಮಂದಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 37 ಮಂದಿ ಸ್ಫರ್ಧಾ ಕಣದಲ್ಲಿದ್ದಾರೆ. ಪಶು ಸಂಗೋಪನಾ ಇಲಾಖೆಯ ಎ.ಸಿ. ಸುರೇಶ್, ಆಹಾರ ಇಲಾಖೆಯ ಹನುಮಂತೇಗೌಡ, ಕಂದಾಯ ಇಲಾಖೆಯ ಆರ್. ಸುರೇಶ್, ಎಂ.ಎಸ್. ಯದುಗಿರೀಶ್, ಕಾಲೇಜಿನಿಂದ ಟಿ. ರಾಮಕೃಷ್ಣೇಗೌಡ, ಸಮಾಜ ಕಲ್ಯಾಣ ಇಲಾಖೆಯ ಎಂ.ಆರ್. ನಂಜಮ್ಮ, ಅರಣ್ಯ ಇಲಾಖೆಯ ಎಂ.ಎಸ್. ಕುಮಾರಸ್ವಾಮಿ, ಅಬಕಾರಿ ಇಲಾಖೆಯ ಎಸ್. ನಾಗರಾಜ, ಕಾರ್ಮಿಕ ಇಲಾಖೆಯ ಕೆ. ಶಿವಪ್ಪ, ಕೈಗಾರಿಕಾ ಇಲಾಖೆಯ ಕೆ. ಸೋಮಶೇಖರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಿ.ಕೆ. ಸುರೇಶ್, ಎಂ.ಸಿ. ಶ್ರೀಕಾಂತ, ಕೆ. ಜಲೇಂದ್ರ, ಜಿ. ಡಿಂಡಿಮಶಂಕರ್, ತೋಟಗಾರಿಕೆ ಇಲಾಖೆಯ ಸಿ.ವಿ. ರಾಜಣ್ಣ, ಖಜಾನೆ ಇಲಾಖೆಯ ಎಂ.ಎಸ್. ಸೋಮಶೇಖರ್, ಭೂಮಾಪನ ಇಲಾಖೆಯ ಆರ್. ನಾಗರಾಜ್, ಮಾರುಕಟ್ಟೆ ಮತ್ತು ಎಪಿಎಂಸಿಯ ಆರ್. ಬಸವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿ.ಎಸ್. ಸದಾಶಿವಪ್ಪ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ಜೆ. ಕುಮಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೀನುಗಾರಿಕೆ ಇಲಾಖೆಯಿಂದ ಇಬ್ಬರೆ ಮತದಾರರಿದ್ದು, ಒಂದು ಸ್ಥಾನಕ್ಕೆ ಇಬ್ಬರ ನಡುವೆಯೇ ಪೈಪೋಟಿ ಏರ್ಪಟ್ಟಿದೆಯಲ್ಲದೆ ಚುನಾವಣೆ ನಡೆದರೂ ಇಬ್ಬರೂ ತಲಾ ಒಂದು ಮತ ಪಡೆದರೆ ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement