ನೌಕರರ ಸಂಘದ ಚುನಾವಣೆ: ಬಿರುಸಿನ ಪ್ರಚಾರ
ಕ.ಪ್ರ.ವಾರ್ತೆ ಕೆ.ಆರ್. ನಗರ ಜು. 21
ರಾಜ್ಯ ಸರ್ಕಾರಿ ನೌಕರರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಜು. 22ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ 35 ಸ್ಥಾನಗಳ ಪೈಕಿ 20 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನುಳಿದ ಸ್ಥಾನಗಳಿಗೆ ಜು. 22ರ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಚುನಾವಣೆ ನಡೆಯಲಿದೆ. ಸಂಜೆ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೃಷಿ ಇಲಾಖೆ ನೌಕರರು ಮಿನಿ ವಿಧಾನಸೌಧದ ಕೊಠಡಿ ಸಂಖ್ಯೆ 3ರಲ್ಲಿ ಮೀನುಗಾರಿಕೆ ಇಲಾಖೆಗೆ ಕೊಠಡಿ ಸಂಖ್ಯೆ 5ರಲ್ಲಿ ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಕೊಠಡಿ ಸಂಖ್ಯೆ 6ರಲ್ಲಿ ನೀರಾವರಿ ಇಲಾಖೆಗೆ ಕೊಠಡಿ ಸಂಖ್ಯೆ ಒಂದರಲ್ಲಿ ಹಿಂದುಳಿದ ವರ್ಗಗಳ ಇಲಾಖೆಗೆ ಕೊಠಡಿ ಸಂಖೈ 2ರಲ್ಲಿ ರೇಷ್ಮೆ ಇಲಾಖೆಗೆ ಕೊಠಡಿ ಸಂಖ್ಯೆ 4ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಉಳಿದಂತೆ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕರಿಗೆ ಬಿಆರ್‌ಸಿ ಕಚೇರಿ ಕೊಠಡಿ ಸಂಖ್ಯೆ 1,2 ಮತ್ತು 3ರಲ್ಲಿ ನ್ಯಾಯಾಂಗ ಇಲಾಖೆಗೆ ಭೂಮಾಪನ ಶಾಖೆಯ ಕೊಠಡಿ ಸಂಖ್ಯೆ 7ರಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಕರ ಭವನದಲ್ಲಿ ಮತ್ತು ತಾಪಂ ಸಿಬ್ಬಂದಿಗೆ ತಾಪಂ ಕಚೇರಿಯಲ್ಲಿಯೇ ಮತ ಕೇಂದ್ರ ತೆರೆಯಲಾಗಿದೆ.
ಅವಿರೋಧ ಆಯ್ಕೆಯಾದವರು: ಪಶು ಸಂಗೋಪನಾ ಇಲಾಖೆಯ ಎ.ಸಿ. ಸುರೇಶ್, ಆಹಾರ ಇಲಾಖೆಯ ಹನುಮಂತೇಗೌಡ, ಕಂದಾಯ ಇಲಾಖೆಯ ಆರ್. ಸುರೇಶ್, ಎಂ.ಎಸ್. ಯದುಗಿರೀಶ್, ಕಾಲೇಜಿನ ಟಿ. ರಾಮಕೃಷ್ಣೇಗೌಡ, ಸಮಾಜ ಕಲ್ಯಾಣ ಇಲಾಖೆಯ ಎಂ.ಆರ್. ನಂಜಮ್ಮ, ಅರಣ್ಯ ಇಲಾಖೆಯ ಎಂ.ಎಸ್. ಕುಮಾರಸ್ವಾಮಿ, ಅಬಕಾರಿ ಇಲಾಖೆಯ ಎಸ್. ನಾಗರಾಜ, ಕಾರ್ಮಿಕ ಇಲಾಖೆಯ ಕೆ. ಶಿವಪ್ಪ, ಕೈಗಾರಿಕಾ ಇಲಾಖೆಯ ಕೆ. ಸೋಮಶೇಖರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಿ.ಕೆ. ಸುರೇಶ್, ಎಂ.ಸಿ. ಶ್ರೀಕಾಂತ, ಕೆ. ಜಲೇಂದ್ರ, ಜಿ. ಡಿಂಡಿಮ ಶಂಕರ್, ತೋಟಗಾರಿಕೆ ಇಲಾಖೆಯ ಸಿ.ವಿ. ರಾಜಣ್ಣ, ಖಜಾನೆ ಇಲಾಖೆಯ ಎಂ.ಎಸ್. ಸೋಮಶೇಖರ್, ಭೂಮಾಪನ ಇಲಾಖೆಯ ಆರ್. ನಾಗರಾಜ್, ಮಾರುಕಟ್ಟೆ ಮತ್ತು ಎಪಿಎಂಸಿಯ ಆರ್. ಬಸವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿ.ಎಸ್. ಸದಾಶಿವಪ್ಪ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ಜೆ. ಕುಮಾರ ಆಯ್ಕೆಯಾಗಿದ್ದಾರೆ.