ಶಾರ್ಟ್ ಸರ್ಕ್ಯೂಟ್:ಕಾರಲ್ಲಿ ಬೆಂಕಿ
ಮೈಸೂರು: ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ಕಾರೊಂದು ಮುಂಭಾಗ ಭಾಗಶಃ ಸುಟ್ಟು ಹೋಗಿರುವ ಘಟನೆ ಇರ್ವಿನ್ ರಸ್ತೆ (ರೇಲ್ವೆ ನಿಲ್ದಾಣ ಬಳಿ) ಭಾನುವಾರ ಬೆಳಗ್ಗೆ ನಡೆದಿದೆ. ಪವನ್ ಮತ್ತು ಸ್ನೇಹಿತರು ಮೈಸೂರಿಗೆ ಫಿಯೆಟ್ ಫಿಗೋ ಕಾರಿನಲ್ಲಿ ಬಂದಿದ್ದು, ವಾಪಸ್ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಕಾರಿನ ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪವನ್ ಮತ್ತು ಸ್ನೇಹಿತರು ಕಾರಿನಿಂದ ಇಳಿದಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡ ಸಂಚಾರ ಪೊಲೀಸರೊಬ್ಬರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಈ ಸಂಬಂಧ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.