ಶಾಲಾ ಮಂತ್ರಿ ಮಂಡಲ ರಚನೆ
ಕ.ಪ್ರ.ವಾರ್ತೆ ಹುಣಸೂರು ಜು. 21
ತಾಲೂಕಿನ ಸಂತೆಕೆರೆ ಕೋಡಿ ಮಂಜುನಾಥ ಹಿರಿಯ ಪ್ರಾಥಮಿಕ ಶಾಲೆಯ 2013-14ನೇ ಸಾಲಿನ ಶಾಲಾ ಮಂತ್ರಿ ಮಂಡಲ ರಚನೆಯಾಗಿದೆ.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗೌರಿಪುರ ಮಹದೇವ್ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿದೆ. ಮುಖ್ಯಮಂತ್ರಿಯಾಗಿ ಆರ್. ಸುಕನ್ಯ, ವರುಣಕುಮಾರ್ (ಉಪ ಮುಖ್ಯಮಂತ್ರಿ), ವಿ. ಕಾರ್ತಿಕ್ (ಗೃಹಸಚಿವ), ಡಿ.ಆರ್. ಶಿವಕುಮಾರ್ (ವಾರ್ತಾ ಸಚಿವ), ಡಿ.ಎನ್. ಚಾಂದಿನಿ (ಹಣಕಾಸು ಸಚಿವೆ), ಬಿ. ದೀಲಿಪ್ (ಸಾರಿಗೆ ಸಚಿವ), ಅನಿಲ್ ಕುಮಾರ್ (ಕ್ರೀಡಾ ಸಚಿವ), ಜೆ. ಆಕಾಶ್ (ಶಿಕ್ಷಣ ಸಚಿವ), ಆರ್. ಆಕಾಶ್ (ಆರೋಗ್ಯ ಸಚಿವ), ಎಸ್. ಪ್ರಸನ್ನ (ಸ್ವಚ್ಛತಾ ಸಚಿವ), ಟಿ.ಎಂ. ಹರ್ಷ (ಪ್ರವಾಸೋದ್ಯಮ ಸಚಿವೆ) ಸುಷ್ಮಿತಾಗೌಡ (ನೀರಾವರಿ ಸಚಿವೆ), ಜಿ.ಬಿ. ರಕ್ಷಿತಾಗೌಡ (ಕನ್ನಡ ಮತ್ತು ಸಂಸ್ಕೃತಿ ಸಚಿವೆ), ಕರುಣಾ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ) ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕ ಕೆ.ಎಂ. ನಾಗೇಶ್ ತಿಳಿಸಿದ್ದಾರೆ.