ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಕ್ಷಕರಿಗೆ ವಂಚನೆ: ಆರೋಪ

Rashmi Kasaragodu
Updated On : 22 Jul 2013, 1:00 am

ಹುಣಸೂರು: ತಾಲೂಕಿನ ಆಶ್ರಮ ಶಾಲಾ ಶಿಕ್ಷಕರಿಗೆ ಕಳೆದ ಮೂರು ವರ್ಷದಿಂದ ಭವಿಷ್ಯ ನಿಧಿ (ಪಿಎಫ್) ನೀಡದೆ ವಂಚಿಸಲಾಗುತ್ತಿದೆ ಎಂದು ತಾಲೂಕು ಆಶ್ರಮ ಶಾಲಾ ಶಿಕ್ಷಕರ ಸಂಘ ಆರೋಪಿಸಿದೆ. ಮೇಜರ್ ಕಾಂತಿ ಏಜೆನ್ಸಿಯು ಹೊರಗುತ್ತಿಗೆ ಮೇಲೆ ನೇಮಿಸಿಕೊಂಡಿದ್ದಾರೆ. ಆದರೆ, ಇಂದಿನವರೆಗೂ ಪಿಎಫ್ ನೀಡುತ್ತಿಲ್ಲ. ಕೂಡಲೇ ತಮಗೆ ಸೇರಬೇಕಾದ ಹಣ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸಂಘ ಎಚ್ಚರಿಸಿದೆ.
ಆದಿ ಮಠ ಮೇಲೆ ಐಟಿ ದಾಳಿ: ಖಂಡನೆ
ಟಿ. ನರಸೀಪುರ: ಆದಿಚುಂಚನಗಿರಿ ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಕಾಲಭೈರವೇಶ್ವರ ಜೋಗಿಗಳ ಒಕ್ಕೂಟದ ಅಧ್ಯಕ್ಷ ಬೇಕರಿ ಸೋಮಣ್ಣ ತೀವ್ರವಾಗಿ ಖಂಡಿಸಿದ್ದಾರೆ. ತಲಾತಲಾಂತರಗಳಿದ ಸಾವಿರಾರು ಮಂದಿಗೆ ಶಿಕ್ಷಣ ನೀಡುತ್ತಾ ಹಾಗೂ ಲಕ್ಷಾಂತರ ಜನರಿಗೆ ದಾಸೋಹ ನಡೆಸಿಕೊಂಡು ಬರುತ್ತಿರುವ ಆದಿಚುಂಚನಗಿರಿ ಧಾರ್ಮಿಕ ಕ್ಷೇತ್ರದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುವ ಮೂಲಕ ಮಠದ ಭಕ್ತರ ಭಾವನೆಯನ್ನು ಘಾಸಿಗೊಳಿಸುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.
ಎಸ್‌ಡಿಎಂಸಿಗೆ ಆಯ್ಕೆ
ಹುಣಸೂರು: ತಾಲೂಕಿನ ಸೊಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸೋಮಶೇಖರ್, ಉಪಾಧ್ಯಕ್ಷರಾಗಿ ಭಾರತಿಬಾಯಿ, ಕಾರ್ಯದರ್ಶಿಯಾಗಿ ಚಲುವರಾಜು, ಸದಸ್ಯರಾಗಿ ನರಸಿಂಹೇಗೌಡ, ಶಂಕರ್, ಮಹದೇವ್, ಮಂಜು, ಧ್ರುವರಾಜು, ರಮೇಶ್, ಪಾರ್ವತಿ, ಮಣಿ, ಪ್ರಮೀಳಾ, ಗಾಯಿತ್ರ, ಚಿತ್ರ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಚಲುವರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement