ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಡಿತರ ಚೀಟಿಗೆ ಭಾವಚಿತ್ರ ತೆಗೆಸಲು ಗ್ರಾಪಂನಲ್ಲಿ ವ್ಯವಸ್ಥೆ

Vishwanath S
Updated On : 24 Jul 2013, 12:27 pm

ಕ.ಪ್ರ.ವಾರ್ತೆ  , ನರಸೀಪುರ ,  ಜು. 23
ಪಡಿತರ ಚೀಟಿಗಾಗಿ ಭಾವಚಿತ್ರ ತೆಗೆಯಲು ಸ್ಥಳೀಯವಾಗಿ ಕಿರಗಸೂರು ಗ್ರಾಪಂನಲ್ಲಿ ಅಂತರ್ಜಾಲ ಹಾಗೂ ಬಯೋವುಟ್ರಿಕ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಹೇಳಿದರು.
ತಾಲೂಕಿನ ಕಿರಗಸೂರು ಗ್ರಾಪಂ ಕಚೇರಿಯಲ್ಲಿ ಅಂತರ್ಜಾಲ ಹಾಗೂ ಬಯೋವುಟ್ರಿಕ್ ಸೌಲಭ್ಯದೊಂದಿಗೆ ಪಡಿತರ ಚೀಟಿಗೆ ಭಾವಚಿತ್ರ ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಪಡಿತರ ಚೀಟಿಗೆ ಕುಟುಂಬದ ಸದಸ್ಯರ ಭಾವಚಿತ್ರ ತೆಗೆಸಿ, ಬಯೋವುಟ್ರಿಕ್ ಸಲ್ಲಿಸಲು ಪಟ್ಟಣ ಪ್ರದೇಶದಲ್ಲಿ ಪರದಾಡುತ್ತಿದ್ದರು. ದಿನದ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಪಂಚಾಯಿತಿಯಲ್ಲೆ ಭಾವಚಿತ್ರ ತೆಗೆಸಲು ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಮಂಡಿ ಪ್ರಕಾಶ್ ಮಾತನಾಡಿದರು. ಉಪಾಧ್ಯಕ್ಷ ಚಿಕ್ಕತಾಯಮ್ಮ, ಸದಸ್ಯರಾದ ಆರ್. ಮಹದೇವು, ಸದಸ್ಯರಾದ ಬಸವರಾಜು, ದೇವರಸನಾಯಕ, ಚಂದ್ರಕಲಾ, ಮೀನಾಕ್ಷಿ ಶಿವಣ್ಣ, ಯಶೋಧ, ಸುಂದರಮ್ಮ, ಚಿನ್ನಬುದ್ಧಿ, ಮಹದೇವಪ್ಪ, ಪ್ರಭಾರ ಪಿಡಿಒ ಸಿದ್ದರಾಜು, ಮಹದೇವಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement