ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೋಧಗಯಾ ಸ್ಫೋಟ: ಆರೋಪಿಗಳ ಬಂಧನಕ್ಕೆ ಆಗ್ರಹ

Vishwanath S
Updated On : 24 Jul 2013, 12:27 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 23
ಬಿಹಾರದ ಬೋಧಗಯಾ ಬಳಿ ಸರಣಿ ಬಾಂಬ್ ಸ್ಫೋಟಿಸಿದ ದುಷ್ಟರನ್ನು ಪತ್ತೆಹಚ್ಚಿ ಶಿಕ್ಷಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
ಧಾರ್ಮಿಕ ಪ್ರಾಥನಾ ಕೇಂದ್ರಗಳ ಮೇಲೆ ದುಷ್ಟಶಕ್ತಿಗಳು ಪದೇ ಪದೇ ದಾಳಿ ನಡೆಸಿ ದೇಶದ ಶಾಂತಿಯನ್ನು ಕದಡುತ್ತಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಎಲ್ಲಾ ಧಾರ್ಮಿಕ ಪ್ರಾರ್ಥನಾ ಸ್ಥಳಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ದಸಂಸ ಮುಖಂಡರಾದ ಮಲ್ಲೇಶ್ ಚುಂಚನಹಳ್ಳಿ ರಾಜಣ್ಣ ಇಟ್ನಾ, ಶ್ರೀನಿವಾಸ್, ಹನುಮಂತು ಬೆಲವತ್ತ, ಗಂಗಾಧರ್, ಶಿವಣ್ಣ, ಪುಟ್ಟಸ್ವಾಮಿ, ರಾಜೇಶ್, ಸೋಮಣ್ಣ, ದೊಡ್ಡಸಿದ್ದು, ಪುಟ್ಟರಾಜು, ವೆಂಕಟರಾಮ್, ಸಣ್ಣಕುಮಾರ್, ದೇವರಾಜು, ಕೃಷ್ಣ, ರಾಜು, ಕೃಷ್ಣ, ಸೋಮಯ್ಯ ಮಲೆಯೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement