ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಂಟಿ ಕೃಷಿ ನಿರ್ದೇಶಕ ಕೃಷ್ಣಯ್ಯ ಇಂದು ನಿವೃತ್ತಿ

Vishwanath S
Updated On : 31 Jul 2013, 12:31 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 30
ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಕೆ.ಆರ್. ಕೃಷ್ಣಯ್ಯ ಅವರು 34 ವರ್ಷಗಳ ಸುದೀರ್ಘ ಸೇವೆಯ ನಂತರ ಬುಧವಾರ (ಜು.31) ನಿವೃತ್ತರಾಗಲಿದ್ದಾರೆ.
ಈಗಿನ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕೆಂಕರೆ ಗ್ರಾಮದ ರಂಗಣ್ಣ- ತಿಮ್ಮಮ್ಮ ಅವರ ಪುತ್ರರಾದ ಕೃಷ್ಣಯ್ಯ ಅವರು ಬಿಎಸ್ಸಿ, ನಂತರ ಬಿಎಸ್ಸಿ (ಅಗ್ರಿ) ಪದವಿ ಪಡೆದರು. ಎಂಎಸ್ಸಿ (ಅಗ್ರಿ) ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. ಇದಲ್ಲದೇ ಫಿಲಿಫೈನ್ಸ್‌ನಲ್ಲಿ ಡಿಪ್ಲೊಮಾ, ಕೃಷಿ ವಿಸ್ತರಣಾ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ.
1994 ರಲ್ಲಿ ರಾಷ್ಟ್ರೀಯ ಉತ್ಪಾದಕ ಪ್ರಶಸ್ತಿ, ಕೊಡಗು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾಗಿದ್ದಾಗ ರಾಜ್ಯ ಸರ್ಕಾರದ ಅತ್ಯುತ್ತಮ ನಾಗರಿಕ ಸೇವಾ ಪ್ರಶಸ್ತಿ, ರೈತ ಮಹಿಳಾ ಸೇವಾ ಪ್ರಶಸ್ತಿ ಪಡೆದಿದ್ದಾರೆ.
1979 ರಲ್ಲಿ ಕೃಷಿ ಅಧಿಕಾರಿಯಾಗಿ ಆಯ್ಕೆಯಾದ ಅವರು ಎರಡು ವರ್ಷಗಳ ತರಬೇತಿಯ ನಂತರ 1981ರಲ್ಲಿ ನಂಜನಗೂಡಿನಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಆರಂಭಿಸಿದರು. 1982ರಲ್ಲಿ ಕನಕಪುರ ಸಹಾಯಕ ಕೃಷಿ ನಿರ್ದೇಶಕರು. 1983 ರಲ್ಲಿ ಮೈಸೂರಿನಲ್ಲಿ ಸಹಾಯಕ ಕೃಷಿ ನಿರ್ದೇಶಕರು. ನಂತರ ಮಂಡ್ಯ ಕಾಡಾ ಕಚೇರಿಯಲ್ಲಿ 2 ವರ್ಷ ಸೇವೆ. 1992 ರಿಂದ 1996 ರವರೆಗೆ ಮೈಸೂರು ಜಿಲ್ಲೆಯ ಪ್ರಧಾನ ಕೃಷಿ ಅಧಿಕಾರಿ. 1996 ರಲ್ಲಿ ಜಂಟಿ ಕೃಷಿ ನಿರ್ದೇಶಕರಾಗಿ ಬಡ್ತಿಯೊಂದಿಗೆ ಮಂಗಳೂರಿನಲ್ಲಿ ಸೇವೆ. ನಂತರ ಮಂಡ್ಯದಲ್ಲಿ ಜಂಟಿ ಕೃಷಿ ನಿರ್ದೇಶಕರು. 2000 ರಿಂದ 2005 ರವರೆಗೆ ಮೈಸೂರಿನಲ್ಲಿ ಜಂಟಿ ಕೃಷಿ ನಿರ್ದೇಶಕರು.
2006 ರಲ್ಲಿ ಮೈಸೂರು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ. 2006 ರಿಂದ 2010ರ ವರೆಗೆ ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು. 2010 ರಿಂದ 2013 ರ ಜು.31 ರವಗೆ ಮೈಸೂರಿನಲ್ಲಿಯೇ ಜಂಟಿ ಕೃಷಿ ನಿರ್ದೇಶಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement