ಪತಿಯಿಂದ ಪರಿಹಾರ ಕೊಡಿಸಿ...
ಕ.ಪ್ರ.ವಾರ್ತೆ , ಮೈಸೂರು , ಜು. 30
ತಮ್ಮ ಪತಿ ನನಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರ ನೀಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ನಗರಪಾಲಿಕೆ ಎಇಇ ತಿಮ್ಮಪ್ಪ ವಿರುದ್ಧ ಪತ್ನಿ ರೂಪಾ ತಿಮ್ಮಪ್ಪ ಆರೋಪಿಸಿದ್ದಾರೆ.
2008ರ, ಏ.18 ರಂದು ಬೆಂಗಳೂರಿನಲ್ಲಿ ನಮ್ಮಿಬ್ಬರಿಗೂ ಮದುವೆಯಾಯಿತು. 3 ವರ್ಷಗಳ ನಾನು ಮೈಸೂರಿನಲ್ಲಿ ಸಂಸಾರ ಮಾಡಿದೆ. ನಂತರ ನಮ್ಮಿಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟು ತವರು ಮನೆಗೆ ಹೋದೆ.
ನನಗೆ ಚಿರಂಜೀವಿ ಎಂಬ ಗಂಡು ಮಗುವಿದ್ದು, ನಮ್ಮಿಬ್ಬರ ಜೀವನಕ್ಕೆ ಪರಿಹಾರ ಕೊಡಿಸುವಂತೆ ನ್ಯಾಯಾಲಯ ಮೊರೆ ಹೋದೆ. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತಿ ತಿಂಗಳು ಸಂಬಳದಲ್ಲಿ 5 ಸಾವಿರ ನೀಡುವಂತೆ ಆದೇಶಿಸಿತು.
ಹಾಗೆ ಕಳೆದ ಜೂನ್‌ನಿಂದ 10 ಸಾವಿರ ನೀಡುವಂತೆ ಆದೇಶಿಸಿದ್ದರೂ ತಮ್ಮ ಪತಿ ಪರಿಹಾರ ನೀಡುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ನಮ್ಮಿಬ್ಬರದೂ ಎರಡನೆ ಮದುವೆ. 2006 ರಲ್ಲಿ ಸುನಿಲ್‌ನೊಂದಿಗೆ ನಾನು ವಿವಾಹಗಿದ್ದೆ. ಮದುವೆ ಮನೆಯಲ್ಲಿ ಗಲಾಟೆ ನಡೆದು ಸಂಸಾರ ಮುರಿದುಬಿದ್ದಿತು.
ನಂತರ ಭಾರತ್ ಮೆಟ್ರಿಮನಿಯಲ್ಲಿ ಹೆಸರು ನೋಂದಾಯಿಸಿದ್ದೆ. ಅದನ್ನು ನೋಡಿದ ತಿಮ್ಮಪ್ಪ ಅವರು ವಿವಾಹದ ಪ್ರಸ್ತಾವನೆ ಇಟ್ಟರು. ಇದಕ್ಕೆ ಎಂಸಿಸಿ ವಲಯ ಕಚೇರಿ ಉದ್ಯೋಗಿ ರಾಜಲಕ್ಷ್ಮೀ ಎಂಬವರು ಮಧ್ಯವರ್ತಿಯಾಗಿ ಮದುವೆ ಮಾಡಿಸಿದರು. ಈಗ ಅವರಿಂದಲೇ ನಮ್ಮಿಬ್ಬರ ನಡುವೆ ಕಲಹ ಏರ್ಪಟ್ಟಿದೆ. ನನ್ನ ಪತಿಯಾದ ತಿಮ್ಮಪ್ಪ ಅವರೂ ಈ ಹಿಂದೆ ಗಿರಿಜಾ ಎಂಬವರನ್ನು ವಿವಾಹವಾಗಿದ್ದರು. ಅವರು ನಿಧನರಾದ ಮೇಲೆ ನನ್ನನ್ನು ವಿವಾಹವಾದರು. ಈಗಲೂ ನಾವು ವಿಚ್ಚೇದನ ಪಡೆದಿಲ್ಲ. ಆದ್ದರಿಂದ ಅವರೊಂದಿಗೆ ಸಂಸಾರ ಮಾಡಲು ಸಿದ್ಧಳಿದ್ದೇನೆ ಎಂದು ರೂಪಾ ತಿಳಿಸಿದರು.