ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಜಣ್ಣರನ್ನೆ ಮುಂದುವರಿಸಿ

Vishwanath S
Updated On : 31 Jul 2013, 12:31 pm

ಮೈಸೂರು: ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತರನ್ನಾಗಿ ಕೆ.ವಿ. ರಾಜಣ್ಣ ಅವರನ್ನೇ ಮುಂದುವರಿಸುವಂತೆ ಕರ್ನಾಟಕ ರಾಜ್ಯ ಅಂಗವಿಕಲರ ವೇದಿಕೆಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಕೇಂದ್ರ ಸರ್ಕಾರ 1995ರಲ್ಲಿ ಅಂಗವಿಕಲರ ಕಾಯಿದೆಯನ್ನು ಜಾರಿಗೆ ತಂದಿತು. 1996 ರಿಂದಲೂ ಅಂಗವಿಕಲರ ಹಕ್ಕುಗಳ ರಕ್ಷಣೆ ಮತ್ತು ಅಂಗವಿಕಲರ ಪೂರ್ಣ ಭಾಗವಹಿಸುವಿಕೆಯ ಕಾಯಿದೆಯು ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿತು. 1996 ರಿಂದ 2010 ರವರೆಗೆ ಕಾಯಿದೆಯ ಬಗ್ಗೆ ಅಂಗವಿಕಲರಿಗಾಗಲಿ, ಅಧಿಕಾರಿಗಳಿಗಾಗಲಿ, ಜನರಿಗಾಗಲಿ ಮಾಹಿತಿ ಇರಲಿಲ್ಲ. 2010ರ ಆ. 16 ರಿಂದ ಕೆ.ವಿ. ರಾಜಣ್ಣ ಆಯುಕ್ತರಾದ ಮೇಲೆ ಅಂಗವಿಕಲರಿಗೆ ಸೌಲಭ್ಯ ದೊರಕಿಸಲು ಪ್ರಯತ್ನ ಸಫಲತೆ ಕಂಡರು ಎಂದು ವೇದಿಕೆ ಕರ್ನಾಟಕ ರಾಜ್ಯ ಅಂಗವಿಕಲರ ವೇದಿಕೆಯ ಸಂಚಾಲಕ ಎಂ. ಪ್ರಭುಸ್ವಾಮಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜಣ್ಣ ಅವರು ನರೇಂದ್ರ ಫೌಂಡೇಷನ್ ಮೂಲಕ 20 ವರ್ಷಗಳಿಂದ ಅಂಗವಿಕಲರಿಗಾಗಿ ದುಡಿಯುತ್ತಿದ್ದರು. ಅವರಿಗೆ ಸಿಕ್ಕ ಆಯುಕ್ತ ಹುದ್ದೆಯಿಂದ ಮತ್ತಷ್ಟು ಸೇವೆಗೆ ಅವಕಾಶ ದೊರೆಯಿತು. ಅವರು 5800 ಜನರಿಗೆ ಪುನವರ್ಸತಿ ಕಲ್ಪಿಸಿದರು, 30 ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಸ್ಥಾಪಿಸಿದರು, ಕನಿಷ್ಠ ಶೇ. 3 ರಷ್ಟು ಅನುದಾನ ಎಲ್ಲಾ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಶಾಸಕರ ನಿಧಿಯಲ್ಲಿ 10 ಲಕ್ಷ ಅನುದಾನ ಕೊಡಿಸಿದರು. ಹೀಗೆ ಅನೇಕ ಅಂಗವಿಕಲರ ಪರ ಕಾರ್ಯಕ್ರಮ ಜಾರಿಗೆ ತಂದರು ಎಂದು ವಿವರಿಸಿದರು.
ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತರ ಹುದ್ದೆ ರಾಜಕೀಯ ಪ್ರೇರಿತ ಹುದ್ದೆಯಲ್ಲ. ಹೀಗಾಗಿ ರಾಜಣ್ಣ ಅವರನ್ನೇ ಆಯುಕ್ತರನ್ನಾಗಿ ಮುಂದುವರಿಸುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement