ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುವರ್ಣ ಮಹೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ

Vishwanath S
Updated On : 31 Jul 2013, 12:31 pm

ಕೆ.ಆರ್. ನಗರ: ತಾಲೂಕಿನ ದೊಡ್ಡಹನಸೋಗೆ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜನಪ್ರತಿನಿಧಿಗಳು, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ತೀರ್ಮಾನಿಸಲಾಯಿತು.
ಮಂಗಳವಾರ ಜಿಪಂ ಸದಸ್ಯ ಸಿ.ಜೆ. ದ್ವಾರಕೀಶ್ ನೇತೃತ್ವದಲ್ಲಿ ನಡೆದ ಶಾಲಾ ಸುವರ್ಣ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ನವೆಂಬರ್ ಮೊದಲ ವಾರದಲ್ಲಿ ಎರಡು ದಿನ ಕಾರ್ಯಕ್ರಮ ನಡೆಸಲು ಸಭೆ ತೀರ್ಮಾನಿಸಿತು.
ಈ ವೇಳೆ ಮಾತನಾಡಿದ ಸಿ.ಜೆ. ದ್ವಾರಕೀಶ್, ಶಾಲೆ ಐವತ್ತು ವರ್ಷ ಪೂರೈಸಿದ ನೆನಪಿಗಾಗಿ ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವ ಸಮರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಇತರ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಳ್ಳಬೇಕು. ಅಲ್ಲದೆ, ಕೆಲವು ಶಾಶ್ವತ ಕೆಲಸ ಮಾಡಲು ಎಲ್ಲರ ಸಹಕಾರ ಬೇಕು ಎಂದರು.
1963ರಲ್ಲಿ ತಾಲೂಕು ಬೋರ್ಡ್ ವತಿಯಿಂದ ಈ ಶಾಲೆ ಆರಂಭವಾಗಿದ್ದು, ಅಂದಿನಿಂದ ಶಾಲೆಯ ಏಳಿಗೆಗೆ ದುಡಿದ ಮಹನೀಯರನ್ನು ಗುರುತಿಸಿ ಗೌರವಿಸುವುದರ ಜೊತೆಗೆ, ಶಾಲಾ ಆವರಣದಲ್ಲಿನ 46 ನೀಲಗಿರಿ ಮರಗಳನ್ನು ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಸುವರ್ಣ ಮಹೋತ್ಸವಕ್ಕೆ ಬಳಸಿಕೊಳ್ಳಲು ಸಭೆ ತೀರ್ಮಾನಿಸಿತು.
ಎಸ್‌ಡಿಎಂಸಿ ಅಧ್ಯಕ್ಷ ಡಿ. ಸ್ವಾಮಿ, ಗ್ರಾಪಂ ಸದಸ್ಯ ಎಚ್.ಡಿ. ರಾಮೇಗೌಡ, ಮುಖಂಡರಾದ ಕೇಶವಮೂರ್ತಿ, ಎಚ್.ಎನ್. ಪ್ರಕಾಶ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಗಾಯಿತ್ರಮ್ಮ, ಎಪಿಎಂಸಿ ನಿರ್ದೇಶಕ ಬಂಡಹಳ್ಳಿ ಕುಚೇಲ, ಪಿಡಿಒ ಶ್ರೀಧರ, ಮುಖಂಡರಾದ ಕೋಳೂರು ರಮೇಶ್, ಲೀಲಾವತಿ, ಶ್ರೀನಿವಾಸ್ ಗೌಡ, ಪುಟ್ಟನಾಯಕ, ಅಣ್ಣೇಗೌಡ, ಮನೋಹರ, ಹರೀಶ, ಮುಖ್ಯ ಶಿಕ್ಷಕ ಬೋರನಾಯಕ, ಹಳಿಯೂರು ಕೃಷ್ಣಮೂರ್ತಿ, ಎಚ್.ಟಿ. ಪ್ರಮೋದ್ ಮತ್ತು ಪೋಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement