ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

12 ರಿಂದ ಮೈವಿವಿ ಕ್ರೀಡಾಕೂಟ

Vishwanath S
Updated On : 1 Aug 2013, 12:16 pm

ಕ.ಪ್ರ.ವಾರ್ತೆ , ಮೈಸೂರು , ಜು. 31
ಮೈಸೂರು ವಿಶ್ವವಿದ್ಯಾನಿಲಯ ಪ್ರತಿನಿಧಿಸಲು ವಿವಿಧ ತಂಡಗಳ ಆಯ್ಕೆ ಸ್ಪರ್ಧೆ ಮತ್ತು ಪಂದ್ಯಾವಳಿಗಳು ಆ. 12 ರಿಂದ 2014ರ ಮಾ. 9 ರವರೆಗೆ ನಡೆಯಲಿವೆ.
ಮೈಸೂರು ವಿವಿಯ ಜಿಮ್ನಾಷಿಯಂ ಹಾಲ್‌ನಲ್ಲಿ ಆ. 12ಕ್ಕೆ ಬ್ಯಾಡ್ಮಿಂಟನ್, ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಆ. 16ಕ್ಕೆ ಬ್ಯಾಸ್ಕೆಟ್‌ಬಾಲ್, ಆ. 19 ವಾಲಿಬಾಲ್, ಆ. 26ಕ್ಕೆ ಖೋ- ಖೋ, ಆ. 29ಕ್ಕೆ ಬಾಲ್‌ಬ್ಯಾಡ್ಮಿಂಟನ್, ಸೆ. 2ಕ್ಕೆ ಕ್ರಾಸ್ ಕಂಟ್ರಿ, ಸೆ. 3ಕ್ಕೆ ಚೆಸ್, ಎಂ.ಸಿ. ಟೆನ್ನಿಸ್ ಕೋರ್ಟ್‌ನಲ್ಲಿ ಸೆ. 6ಕ್ಕೆ ಟೆನ್ನಿಸ್, ಜಿಮ್ನಾಷಿಯಂ ಹಾಲ್‌ನಲ್ಲಿ ಸೆ. 12ಕ್ಕೆ ಜಿಮ್ನಾಸ್ಟಿಕ್ಸ್, ಸ್ವಿಮ್ಮಿಂಗ್, ಡೈವಿಂಗ್, ಕುಸ್ತಿ, ಯೋಗ, ಉತ್ತಮ ದೈಹಿಕ, ವೆಟ್ ಲಿಫ್ಟಿಂಗ್, ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಸೆ. 16ಕ್ಕೆ ಕಬಡ್ಡಿ, ಸೆ. 19ಕ್ಕೆ ಫುಟ್ಬಾಲ್, ಸೆ. 23ಕ್ಕೆ ಹ್ಯಾಂಡ್‌ಬಾಲ್, ಸೆ. 26ಕ್ಕೆ ಅಥ್ಲೆಟಿಕ್ಸ್, ಅ. 21ಕ್ಕೆ ಹಾಕಿ, ಅ. 24ಕ್ಕೆ ಕ್ರಿಕೆಟ್, ಅ. 28ಕ್ಕೆ ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ.
ಪ್ರೊ. ಶೇಷಣ್ಣ ದತ್ತಿ ಉಪನ್ಯಾಸ ಕಾರ್ಯಕ್ರಮವು ಸೆ. 13ರ ಬೆಳಗ್ಗೆ 10.30ಕ್ಕೆ ಮಾನಸಗಂಗೋತ್ರಿಯ ರಾಣಿ ಬಹದ್ಧೂರ್ ಸಭಾಂಗಣದಲ್ಲಿ ನಡೆಯಲಿದ್ದು, ಕೆ.ಆರ್. ಆಸ್ಪತ್ರೆಯ ಡಾ.ಬಿ.ಜಿ. ಸಾಗರ್ ಉಪನ್ಯಾಸ ನೀಡುವರು. ಸೆ. 10ಕ್ಕೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ ತಿಳಿಸಿದ್ದಾರೆ.
ಅಂತರ ಕಾಲೇಜು ಕ್ರೀಡಾಕೂಟ: ಸೆ. 3 ರಿಂದ 7 ರವರೆಗೆ ನ್ಯಾ. ಹೊಂಬೇಗೌಡ ಸ್ಮಾರಕ ಅಂತರ ಕಾಲೇಜು ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ, 2014ರ ಜ. 30 ರೊಳಗೆ ವಲಯ ಮಹಿಳಾ ಕ್ರೀಡಾಕೂಟ, ಫೆ. 15 ರೊಳಗೆ ವಲಯ ಪುರುಷ ಕ್ರೀಡಾಕೂಟ, ಫೆ. 13 ರಿಂದ 15 ರೊಳಗೆ ಅಂತರ ವಲಯ ಮಹಿಳಾ ಕ್ರೀಡಾಕೂಟ, ಮಾ. 7 ರಿಂದ 9 ರೊಳಗೆ ಅಂತರ ವಲಯ ಪುರುಷ ಕ್ರೀಡಾಕೂಟ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement