ಚೀಟಿ ವ್ಯವಹಾರ: ಹಲವರಿಗೆ ವಂಚನೆ
ಮೈಸೂರು: ಚೀಟಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಹಣ ಕಟ್ಟಿದವರಿಗೆ ಮರು ಪಾವತಿದೆ ಲಕ್ಷಾಂತರ ರು. ವಂಚಿಸಿ ಪರಾರಿಯಾಗಿರುವ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನಿಮಂಟಪ ಬಳಿಯ ಶಿವರಾತ್ರೀಶ್ವರನಗರ ನಿವಾಸಿ ಕಲ್ಯಾಣ್ ವಂಚಿಸಿ ಪರಾರಿಯಾದ ವ್ಯಕ್ತಿ. ಈತನ ಪತ್ನಿ ವಾಣಿ ಎಂಬವರು ಬೆಂಗಳೂರಿನಲ್ಲಿ ಅಧಿಕಾರಿಯಾಗಿದ್ದು, ಎರಡು ತಿಂಗಳ ಹಿಂದೆ ಪತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಶಿವರಾತ್ರೀಶ್ವರ ನಗರದಲ್ಲಿ ಅಂಗಡಿ ಇರಿಸಿಕೊಂಡಿರುವ ಕಲ್ಯಾಣ ಚೀಟಿ ವ್ಯವಹಾರ ನಡೆಸುತ್ತಿದ್ದ. ವರ್ಷದ ಹಿಂದೆ ಚೀಟಿ ಆರಂಭಿಸಿದ್ದು, ಇದ್ದಕ್ಕಿಂದ್ದಂತೆ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಎನ್.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.