ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಲೇರಿಯಾ ವಿರೋಧಿ ಜಾಥಾ

Vishwanath S
Updated On : 1 Aug 2013, 12:17 pm

ಕ.ಪ್ರ.ವಾರ್ತೆ , ಮೈಸೂರು , ಜು. 31
ನಗರದ ಮಾನಸ ನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಸಹಯೋಗದಲ್ಲಿ ಮಲೇರಿಯಾ ವಿರೋಧಿ ಜಾಥಾವನ್ನು ಬುಧವಾರ ಆಯೋಜಿಸಿತ್ತು.
ಮಾನಸ ನಗರದ ಪಟ್ಟಲದಮ್ಮ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಲೇರಿಯಾ ಮತ್ತು ಡೆಂಘೀ ವಿರೋಧಿ ಮಾಸಾಚರಣೆಯಲ್ಲಿ ವೈದ್ಯರು ಉಪನ್ಯಾಸ ನೀಡಿದರು. ಮಕ್ಕಳು ವಿವಿಧ ಘೋಷಣಾ ಫಲಕ ಹಿಡಿದು ಮಾನಸ ನಗರ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಜಾಗೃತಿ ಮೂಡಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಮಂಜುನಾಥ್, ಮಲೇರಿಯಾ ಹಾಗೂ ಡೆಂಘೀ ರೋಗ, ನಿಯಂತ್ರಣದ ಕ್ರಮ ಪರಿಚಯಿಸಿದರು.
ಸೊಳ್ಳೆಯಿಂದ ಹರಡುವ ಮಲೇರಿಯಾ ಹಾಗೂ ಡೆಂಘೀ ರೋಗವು ಅನೈರ್ಮಲ್ಯ, ಕಲುಷಿತ ನೀರು, ಹಳೆಯ ಟೈರ್‌ಗಳು ಇರುವ ಕಡೆ ಸೊಳ್ಳೆ ಉತ್ಪತ್ತಿಯಾಗಿ, ಈ ರೋಗ ಹರಡುತ್ತವೆ ಎಂದರು.
ಸಾಮಾನ್ಯ ಜ್ವರ ಬಂದರೆ 3 ದಿನ ಪ್ಯಾರಸಿಟೆಮಲ್ ಮಾತ್ರೆ ಸೇವಿಸಿದರೆ ಹೋಗುತ್ತದೆ. ಜ್ವರ ಉಳಿದರೆ 2ನೇ ಹಂತದಲ್ಲಿದೆ ಎಂದು ತಿಳಿಯಬೇಕು. ವೈರಸ್ ರಕ್ತನಾಳ ಪ್ರವೇಶಿಸಿ ಅದನ್ನು ನಾಶ ಮಾಡುವ ಮೂಲಕ ರಕ್ತಸ್ರಾವ ಆಗುತ್ತದೆ. ಶಾಕ್ ಹಂತದಲ್ಲಿ ಕೋಮಾಕ್ಕೆ ತಲುಪಿ ಜೀವ ಹೋಗುವ ಸ್ಥಿತಿ ಬರುತ್ತದೆ. ಶೇ. 95ರಷ್ಟು ಮಂದಿಗೆ ಡೆಂಘೀ ಬಂದರೆ ವಾಸಿಯಾಗುತ್ತದೆ. ಉಳಿಕೆ ಶೇ. 5ರಲ್ಲಿ ಒಂದಿಬ್ಬರು ಮೃತಪಡುವ ಸಾಧ್ಯತೆ ಇದೆ ಎಂದರು.
ಮಾನಸ ನಗರ ಮತ್ತು ಗಂಗೋತ್ರಿ ಬಡಾವಣೆಯಲ್ಲಿ ಜಾಥಾ ನಡೆಯಿತು. ಮೈಸೂರು ವೈದ್ಯ ಕಾಲೇಜಿನ ಡಾ.ಎಂ. ದಯಾನಂದ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಕೃಷ್ಣಪ್ಪ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement