ರಾಕೇಶ್ ಅಭಿಮಾನಿಗಳ ಒಕ್ಕೂಟಕ್ಕೆ ಆಯ್ಕೆ
ಕ.ಪ್ರ.ವಾರ್ತೆ , ಟಿ.ನರಸೀಪುರ , ಜು. 31
ಕರ್ನಾಟಕ ಪ್ರದೇಶ ರಾಕೇಶ್ ಸಿದ್ದರಾಮಯ್ಯ ಅಭಿಮಾನಿಗಳ ಒಕ್ಕೂಟದ ಮೈಸೂರು ಜಿಲ್ಲಾ ಘಟಕ ಹಾಗೂ ನಗರ ಘಟಕಕ್ಕೆ ನೂತನವಾಗಿ ಪದಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು.
ಅಧ್ಯಕ್ಷ- ಸಿ. ಬಸವರಾಜು, ಉಪಾಧ್ಯಕ್ಷರು- ಎಂ. ಮಹದೇವಸ್ವಾಮಿ, ಎಂ. ರವಿಚಂದ್ರ, ಪ್ರಧಾನ ಕಾರ್ಯದರ್ಶಿ- ಬಿ.ಜಿ. ಸಂಘಟನಾ ಕಾರ್ಯದರ್ಶಿಗಳು- ಕಾತ್ಯಾಯಿನಿ, ಪಿ.ಬಿ. ರವೀಶ, ಮಹದೇವ, ಸಂಚಾಲಕರು- ವಿ. ರಮೇಶ, ಎನ್. ರವಿಕುಮಾರ್, ಕಾರ್ಯದರ್ಶಿಗಳು- ಕೃಷ್ಣ, ಎನ್. ಮಹದೇವಸ್ವಾಮಿ, ಬಿ. ಕುಮಾರ, ಮಹಿಳಾ ಕಾರ್ಯದರ್ಶಿಗಳು- ಮಂಜುಳಾ ಚೌಧರಿ, ಎಂ. ಸರಸ್ವತಿ, ಸಲಹೆಗಾರ- ಎಸ್. ಸಿದ್ದರಾಜು, ನಿರ್ದೇಶಕರು- ಶ್ಯಾಂಸುಂದರ್, ಡಿ. ಶ್ರೀನಿವಾಸ್, ಆರ್. ವಿಜಯ್, ಎಲ್. ಶಾಮಚಾರಿ, ಎಸ್. ಅವಿನಾಶ್, ವೆಂಕಟೇಶ್, ಪ್ರಶಾಂತಕುಮಾರ್, ವೆಂಕಟೇಶ್.
ಮೈಸೂರು ನಗರದ ಎನ್.ಆರ್. ವಿಧಾನಸಭಾ ಕ್ಷೇತ್ರ ಘಟಕಕ್ಕೆ ನವೀದ್ ಪಾಷ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಘಟಕಕ್ಕೆ ಎಸ್. ಮಹದೇವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಹಮದ್ ಹುಸೇನ್ ಅವರು ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ವಿತರಿಸಿದರು.
ರಾಕೇಶ್ ಸಿದ್ದರಾಮಯ್ಯ ಅಭಿಮಾನಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಟಿ.ಜಿ. ಪುಟ್ಟಸ್ವಾಮಿ, ಕಾರ್ಯದರ್ಶಿ ಸೋಮಣ್ಣ, ಸಂಚಾಲಕ ಎಚ್. ಅಣ್ಣಯ್ಯಸ್ವಾಮಿ, ವರುಣ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಆರ್. ಕಿಶೋರ್‌ಕುಮಾರ್ ಇದ್ದರು.