ಕೆಡಿಪಿ ಸಭೆ: ವರದಿ ಸಲ್ಲಿಕೆಗೆ ಸೂಚನೆ
ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರೆಯಲಾಗುವ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು 2012- 13ನೇ ಸಾಲಿನಲ್ಲಿ ಇಲಾಖೆಯಿಂದ ಸಾಧಿಸಿದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ವರದಿಗಳನ್ನು ಜಿಪಂ ಯೋಜನಾ ಶಾಖೆಗೆ ಜೂ. 3 ರೊಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ. ಜಿಪಂ ನೀಡಿದ ನಮೂನೆಯಲ್ಲಿ ಎ- 4 ಅಳತೆಯ ಲ್ಯಾಂಡ್ಸ್ಕೇಪ್ ಮತ್ತು ನುಡಿ ಅಕ್ಷರದಲ್ಲಿ ತಯಾರಿಸಿ ಹಾರ್ಡ್ ಮತ್ತು ಸಾಫ್ಟ್ ಕಾಪಿಯನ್ನು ಹಾಗೂ ಇಮೇಲ್ ್ಛಠ್ಟಟಣಡಅಣಝ್ಟ್ಟ.್ಛ್ಟಟ ಮೂಲಕವೂ ಸಲ್ಲಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೋರಿದ್ದಾರೆ. ಇಲಾಖೆಯ ಚಿತ್ರಣ (ಅಂಕಿ ಅಂಶಗಳು), ಕಾರ್ಯಕ್ರಮಗಳ ಗುರಿ ಮತ್ತು ಸಾಧನೆ (2012-13ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಹಾಗೂ 2013- 14ನೇ ಸಾಲಿನ ಮೇ ಮಾಹೆಯ ಅಂತ್ಯಕ್ಕೆ), ಇಲಾಖೆಯ ಗುರುತರವಾದ ವಿಶೇಷ ಸಾಧನೆ, ಖಾಲಿ ಹುದ್ದೆಗಳ ವಿವರ, ಸಮಸ್ಯೆಗಳು, ಆಡಳಿತ ಸುಧಾರಣೆಗಾಗಿ ತೆಗೆದುಕೊಂಡಿರುವ ಕ್ರಮಗಳು ಈ ಎಲ್ಲ ಮಾಹಿತಿಗಳನ್ನು ನೀಡುವಂತೆ ತಿಳಿಸಿದ್ದಾರೆ.