ಗೋವಿಂದರಾಜುಗೆ ಬೀಳ್ಕೊಡುಗೆ
ಕ.ಪ್ರ.ವಾರ್ತೆ ಕೆ.ಆರ್. ನಗರ ಜೂ. 1
ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಆರ್. ಗೋವಿಂದರಾಜು ಅವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಅಧ್ಯಕ್ಷತೆ ವಹಿಸಿದ್ದ ತಾ. ಸಹಾಯಕ ಕೃಷಿ ನಿರ್ದೇಶಕ ಡಾ. ಸೋಮಶೇಖರ್ ಮಾತನಾಡಿ, ಸೇವೆಯಿಂದ ನಿವೃತ್ತರಾದ ಬಿ.ಆರ್. ಗೋವಿಂದರಾಜು ಅವರು ತಮ್ಮ ಸೇವಾ ಅವಧಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಇಂತಹ ಕೆಲಸಗಾರರು ಇದ್ದರೆ ಕಚೇರಿಗಳ ಘನತೆ ಹೆಚ್ಚುತ್ತದೆ ಎಂದು ಹೇಳಿದರು. ನಿವೃತ್ತಗೊಂಡ ಗೋವಿಂದರಾಜು ಮಾತನಾಡಿ, ನಾನು ಕೆಲಸಕ್ಕೆ ಸೇರಿದ ಕಚೇರಿಯಲ್ಲಿಯೇ ನಿವೃತ್ತನಾಗುತ್ತಿರುವುದು ನನಗೆ ಸಂತಸ ತಂದಿದ್ದು, ನನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ತೃಪ್ತಿ ಇದ್ದು, ಕೃಷಿ ಇಲಾಖೆಯ ಸೇವೆ ಸಂತಸ ನೀಡಿತು ಎಂದು ತಿಳಿಸಿದರು. ಶಿವರಾಂ, ರಾಮೇಗೌಡ, ಚಂದ್ರೇಗೌಡ, ಮಹದೇವ್, ಲೋಕನಾಥ್, ಶಿವಕುಮಾರ್, ಭಾಗ್ಯಮ್ಮ, ಜಗದೀಶ್, ಪುಟ್ಟಣ್ಣ, ಗಣೇಶ್, ಪ್ರಸನ್ನ ಇದ್ದರು.