ಜಾರಕಿಹೊಳಿ 52ನೇ ಜನ್ಮದಿನ: ಅಭಿಮಾನಿ ಬಳಗ ಹಣ್ಣು ವಿತರಣೆ
ಕ.ಪ್ರ.ವಾರ್ತೆ ಕೆ.ಆರ್. ನಗರ ಜೂ. 1
ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ 52ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಶನಿವಾರ ಹಣ್ಣು ವಿತರಿಸಲಾಯಿತು.
ಸಂಸದ ಎಚ್. ವಿಶ್ವನಾಥ್ ಹಣ್ಣು ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಯುವ ರಾಜಕಾರಣಿಯಾಗಿರುವ ಜಾರಕಿಹೊಳಿ ಇತರರಿಗೆ ಮಾದರಿಯಾಗಿದ್ದು, ಅವರ ಅಭಿಮಾನಿ ಬಳಗದವರು ಸದಾ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ದೀನ ದಲಿತರ, ನೊಂದವರ ಸೇವೆ ಮಾಡಬೇಕು ಎಂದು ಹೇಳಿದರು.
ಬಳಗದ ಸುಬ್ಬುಕೃಷ್ಣ, ತೋಟಪ್ಪನಾಯಕ, ನಾಗರಾಜು, ಮಹದೇವನಾಯಕ, ಎ.ಟಿ. ಶಿವಣ್ಣ, ಪೆರಿಸ್ವಾಮಿ, ರಿಜ್ವಾನ್ ಉಲ್ಲಾಖಾನ್, ದೇವರಾಜು ಇದ್ದರು.