ಮಾಜಿ ಶಾಸಕ ಬಸವರಾಜುಗೆ ಕಾರ್ಯಕರ್ತರಿಂದ ಸನ್ಮಾನ
ಪಿರಿಯಾಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಗೆಲವಿಗೆ ಸಹಕರಿಸಿದ ಮಾಜಿ ಶಾಸಕ ಎಚ್.ಸಿ. ಬಸವರಾಜು ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು. ತಾಲೂಕಿನ ನಂದಿನಾಥಪುರ ಗ್ರಾಮದ ಎಚ್.ಸಿ. ಬಸವರಾಜು ಅವರ ನಿವಾಸಕ್ಕೆ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಪಿ. ಪ್ರಶಾಂತ್ಗೌಡ ಹಾಗೂ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್ಕುಮಾರ್ ಪಕ್ಷದ ಕಾರ್ಯಕರ್ತರೊಂದಿಗೆ ತೆರಳಿ ಅಭಿನಂದಿಸಿದರು. ಮುಖಂಡರಾದ ಶಿವರಾಜ್, ರಾಜು, ಶಿವರಾಂ, ಹರೀಶ್, ಕುಮಾರ್, ಲಕ್ಷ್ಮಿನಾರಾಯಣ ಇದ್ದರು.
ಹರಕೆ ತೀರಿಸಿದ ಕಾಂಗ್ರೆಸ್ ಕಾರ್ಯಕರ್ತರು
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 1
ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಗೆಲವು ಸಾಧಿಸಿದ ಹಿನ್ನೆಲೆ ಇಲ್ಲಿನ ಮಸಣೀಕಮ್ಮ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಮಾಜಿ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ಕುಮಾರ್, ಪಪಂ ಮಾಜಿ ಸದಸ್ಯ ಸುರೇಶ್, ಮುಖಂಡರಾದ ಶಿವರಾಜ್, ಮಹದೇವ್, ಹರೀಶ್, ಸುರೇಶ್ ಇದ್ದರು.