ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಸ್ ಬಿಹಾರಿ ಕೊಡುಗೆ ಅನನ್ಯ: ರಾಮಕೃಷ್ಣ

Rashmi Kasaragodu
Updated On : 2 Jun 2013, 12:15 pm

ಕ.ಪ್ರ.ವಾರ್ತೆ    ಮೈಸೂರು    ಜೂ. 1
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ ಅವರ ಕೊಡುಗೆ ಅಪಾರ ಎಂದು ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ ಸಂಚಾಲಕ ಟಿ.ಎನ್. ರಾಮಕೃಷ್ಣ ಹೇಳಿದರು.
ರಾಷ್ಟ್ರಗೌರವ ಸಂರಕ್ಷಣಾ ಪರಿಷದ್ ವತಿಯಿಂದ ಶನಿವಾರ ಕುವೆಂಪುನಗರದಲ್ಲಿರುವ ಮೈಲ್ಯಾಕ್ ಮಾಜಿ ಅಧ್ಯಕ್ಷ ಎಂ.ವಿ. ರವಿಶಂಕರ್ ನಿವಾಸದಲ್ಲಿ ಏರ್ಪಡಿಸಿದ್ದ ಮನೆ- ಮನಗಳಿಗೆ ಕ್ರಾಂತಿಕಾರಿಗಳು ಕಾರ್ಯಕ್ರಮದಲ್ಲಿ ರಾಸ್ ಬಿಹಾರಿ ಬೋಸ್ ಕುರಿತು ಉಪನ್ಯಾಸ ನೀಡಿದರು.
ಅಂದಿನ ಕಾಲಕ್ಕೆ ಶ್ರೀಮಂತ ರಾಷ್ಟ್ರವಾಗಿದ್ದ ಭಾರತದ ವಿವಿಧೆಡೆ ಒಂದು ಸಾವಿರಕ್ಕೂ ಅಧಿಕ ಸಂಸ್ಥಾನಗಳು ಆಳುತ್ತಿದ್ದವು. ಆದರೆ, ಒಗ್ಗಟ್ಟಿನ ಕೊರತೆಯಿಂದ ಬ್ರಿಟಿಷರು ನಮ್ಮನ್ನು ಆಳಿದರು. ಬ್ರಿಟಿಷರ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸಬೇಕೆಂಬ ಏಕೈಕ ಹಠದೊಂದಿಗೆ ಹೋರಾಡಿದವರಲ್ಲಿ ಬಂಗಾಳದ ರಾಸ್ ಬಿಹಾರಿ ಬೋಸ್ ಅವರೂ ಒಬ್ಬರು. ಬದುಕಿದ್ದ 57 ವರ್ಷಗಳಲ್ಲಿ 45 ವರ್ಷಗಳನ್ನು ವಿದೇಶಗಳಲ್ಲೇ ಕಳೆದರು. ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಸುಮಾರು 8 ವರ್ಷಗಳ ಅಜ್ಞಾತವಾಸದಲ್ಲಿದ್ದುಕೊಂಡೆ ಭಾರತದಲ್ಲಿ ಚಳವಳಿ ನಡೆಯುವಂತೆ ನೋಡಿಕೊಂಡರು ಎಂದರು.
ಭಾರತದಿಂದ ಪಲಾಯನ ಮಾಡಿದ ರಾಸ್ ಬಿಹಾರಿ ಬೋಸ್ ಜಪಾನ್ ದೇಶದಲ್ಲಿ ಅತಿ ಹೆಚ್ಚು ವರ್ಷಗಳ ನೆಲೆಸಿ ಅಲ್ಲಿಯ ನಾಗರಿಕತೆಯನ್ನು ಪಡೆದುಕೊಳ್ಳುತ್ತಾರೆ. ತಮಗೆ ಆಶ್ರಯ ನೀಡಿದವರ ಮಗಳನ್ನು ಮದುವೆ ಮಾಡಿಕೊಂಡು ಅಲ್ಲಿನ ಸಂಸತ್ತಿಗೆ ಸಲಹೆಗಾರರಾಗಿ ಕೆಲಸ ನಿರ್ವಹಿಸಿದರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement