ಕಾಡು ಹಂದಿ ದಾಳಿ: ಮೂವರಿಗೆ ಗಾಯ
ಕ.ಪ್ರ.ವಾರ್ತೆ ಕೆ.ಆರ್. ನಗರ ಜೂ. 3
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಕೆಸ್ತೂರುಕೊಪ್ಪಲು ಮತ್ತು ಕಂಚುಗಾರನ ಕೊಪ್ಪಲಿನಲ್ಲಿ ಈ ಘಟನೆ ನಡೆದಿದ್ದು, ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಕೆಸ್ತೂರುಕೊಪ್ಪಲಿನ ನವೀನ್ಕುಮಾರ್ ಅವರ ಪತ್ನಿ ಮಂಜುಳಾ ಕೆ.ಆರ್. ನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಂಚುಗಾರನಕೊಪ್ಪಲಿನ ಕೆ.ಎನ್. ರಾಮೇಗೌಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೋರೆಗೌಡ ಎಂಬವವರಿಗೆ ಸಣ್ಣ- ಪುಟ್ಟ ಗಾಯಗಳಾಗಿವೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆ.ಎನ್. ರಾಮೇಗೌಡ ಅವರ ಮೇಲೆ ಕಾಡು ಹಂದಿ ಏಕಾಏಕಿ ದಾಳಿ ಮಾಡಿದ ಗಾಯಗೊಳಿಸಿ ನಂತರ ರಸ್ತೆಯಲ್ಲಿ ಸೈಕಲ್ ಮೇಲೆ ತೆರಳುತ್ತಿದ್ದ ಬೋರೆಗೌಡ ಅವರ ಮೇಲೂ ದಾಳಿ ಮಾಡಿದೆ.
ನಂತರ ಕೆಸ್ತೂರು ಕೊಪ್ಪಲಿನ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ ಅವರ ಮೇಲೆ ತೀವ್ರವಾಗಿ ದಾಳಿ ನಡೆಸಿದ ಕಾಡು ಹಂದಿ ಗಂಭೀರವಾಗಿ ಗಾಯಗೊಳಿಸಿದೆ. ಜತೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಪತಿ ನವೀನ್ಕುಮಾರ್ ಪತ್ನಿಯನ್ನು ರಕ್ಷಿಸಿದರು. ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ ಆಕೆಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಕಾಡುಹಂದಿ ಉಪಟಳ: ಕೆಸ್ತೂರು ಕೊಪ್ಪಲು, ಕೆಸ್ತೂರು ಮತ್ತು ಕಂಚುಗಾರನ ಕೊಪ್ಪಲಿನ ಸುತ್ತಮುತ್ತ ಕಾಡುಹಂದಿಗಳ ಉಪಟಳ ಹೆಚ್ಚಾಗಿದ್ದು, ಜಮೀನಿನಲ್ಲಿ ಕೆಲಸ ಮಾಡುವವರ ಮೇಲೆ ದಾಳಿ ಮಾಡುತ್ತಿರುವುದರಿಂದ, ಸಾರ್ವಜನಿಕರು ಭಯಭೀತರಾಗಿದ್ದಾರಲ್ಲದೆ,
ಎರಡು ದಿನಗಳ ಹಿಂದೆ ಕೆಸ್ತೂರುಕೊಪ್ಪಲಿನ ಸಣ್ಣೇಗೌಡ ಎಂಬವರ ಮೇಲೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಂದಿ ದಾಳಿ ಮಾಡಿದ್ದು, ರೈತರು ಆತಂಕಗೊಂಡಿದ್ದಾರೆ.