ಬೀದಿ ದೀಪ ಬಿಡಿಭಾಗ ಕಳವು
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೆತ್ತಿಕೊಳ್ಳಲಾಗಿರುವ ಹೊರ ವರ್ತುಲ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಯುಕ್ತ ಡಾ.ಸಿ.ಜಿ. ಬೆಟ್‌ಸೂರ್‌ಮಠ ರಾತ್ರಿ ವೇಳೆ ಭೇಟಿ ನೀಡಿ ಪರಿಶೀಲಿಸಿದರು.
ಕೆಲವು ದುಷ್ಕರ್ಮಿಗಳು ಬನ್ನೂರು ಜಂಕ್ಷನ್‌ನಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜಂಕ್ಷನ್‌ವರೆಗೆ ಇರುವ ವರ್ತುಲ ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳ ಕಂಬದಲ್ಲಿರುವ ಕಬ್ಬಿಣದ ಮುಚ್ಚಳಗಳು, ಮಿನೇಚರ್ ಸರ್ಕ್ಯೂಟ್ ಬ್ರೇಕರ್‌ಗಳನ್ನು ಕಳವು ಮಾಡಿದ್ದಾರೆ. ಇಂತಹ ದುಷ್ಕರ್ಮಿಗಳ ಬಗ್ಗೆ, ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಸಾರ್ವಜನಿಕರ ಬಗ್ಗೆ ಸುಳಿವು ಸಿಕ್ಕರೆ ಎಂಡಿಎ ಸಹಾಯವಾಣಿ 0821- 2421629 ತಿಳಿಸುವಂತೆ ಕೋರಿದ್ದಾರೆ. ಕೆಲವು ಸಾರ್ವಜನಿಕರು ರಸ್ತೆಯ ಬದಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದ್ದು, ಇದು ಕಾನೂನುಬಾಹಿರ. ಹಿನಕಲ್ ಜಂಕ್ಷನ್‌ನಿಂದ ಬೋಗಾದಿ ಜಂಕ್ಷನ್‌ವರೆಗೆ ಇರುವ ಸಪ್ತಪದಿ, ರಾಘವೇಂದ್ರ ಸ್ಕೈ ಇತರೆ ಬಾರ್ ಮಾಲೀಕರು ಮದ್ಯಪಾನ ಸರಬರಾಜು ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಅಲ್ಲದೆ, ಸರ್ವೀಸ್ ರಸ್ತೆಯಲ್ಲಿ ಪರಿಪೂರ್ಣವಾಗಿ ವಾಹನ ನಿಲುಗಡೆಗಾಗಿ ವ್ಯವಸ್ಥೆ ಮಾಡಿಕೊಂಡು ವಾಹನ ಸಂಚಾರಕ್ಕೆ ತೊಂದರೆ ನೀಡುತ್ತಿರುವುದೂ ಗಮನಕ್ಕೆ ಬಂದಿದೆ. ಇದು ಇಲ್ಲಿಗೆ ಕೊನೆಯಾಗಬೇಕು. ಮುಂದೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಕೃಷ್ಣರಾಜ ಉಪ ವಿಭಾಗದ ಎಸಿಪಿ ನಾಗಪ್ಪ, ಸರಸ್ವತಿಪುರಂ ಠಾಣೆ ಇನ್‌ಸ್ಪೆಕ್ಟರ್ ಚಂದ್ರಶೇಖರ್, ಕಾರ್ಯಪಾಲಕ ಎಂಜಿನಿಯರ್ ಎಸ್. ವೀರಭದ್ರಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್. ಕಿಶೋರ್‌ಚಂದ್ರ ಇದ್ದರು.