ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವರ್ಷವಾದರೂ ನವೀಕರಣಆಗದ ಪಾರ್ಕ್: ಆರೋಪ

Rashmi Kasaragodu
Updated On : 4 Jun 2013, 11:54 am

ಮೈಸೂರು: ಹ್ಯಾಪಿ ಮ್ಯಾನ್ ಪಾರ್ಕ್ ಎಂದೇ ಹೆಸರು ಪಡೆದಿರುವ ಸರಸ್ವತಿಪುರಂನ ಸಂಜೀವಿನಿ ಉದ್ಯಾನವನ ತೀರಾ ಹಾಳಾಗಿ ವರ್ಷ ಕಳೆದರೂ ಪಾಲಿಕೆ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕನ್ನಡ ಯುವಜನ ಜಾಗೃತಿ ವೇದಿಕೆ ಆರೋಪಿಸಿದೆ.
ಪಾಳು ಬಿದ್ದಿದ್ದ ಸದರಿ ಉದ್ಯಾನವನವನ್ನು 8 ವರ್ಷಗಳ ಹಿಂದೆ ಹೆಚ್ಚಿನ ಅನುದಾನ ಒದಗಿಸಿ ಪುನರುಜ್ಜೀವನಗೊಳಿಸಲಾಗಿತ್ತು. ಬಹುಬೇಗ ಜನಮನ್ನಣೆ ಪಡೆದು ಮಕ್ಕಳ, ಸಾರ್ವಜನಿಕರಿಂದ ತುಂಬಿ ತುಳುಕುತ್ತಿದ್ದ ಈ ಜಾಗವನ್ನು ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಮನಬಂದಂತೆ ಛಿದ್ರಗೊಳಿಸಿದ್ದಾರೆ. ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ವಾರ್ಡ್ ವ್ಯಾಪ್ತಿಗೆ ಬರುವ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸುವ ಕಡೆ ಗಮನ ಹರಿಸಬೇಕು ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ಸತ್ಯಾನಂದ ವಿಟ್ಟು ಒತ್ತಾಯಿಸಿದ್ದಾರೆ.
ಉದ್ಯಾನವನದ ನವೀಕರಣ ನೆಪವಿಟ್ಟು ಹಿಂದಿಗಿಂತಲೂ ಅನವಶ್ಯಕ ಕಟ್ಟಡ ನಿರ್ಮಾಣ ಮಾಡಲಾಗಿದೆ. ಉದ್ಯಾನವನದ ಕಟ್ಟಡ ಸಾಮಗ್ರಿಗಳು ಈ ಉದ್ಯಾನವನದ ಬದಿಯ ರಸ್ತೆಯಲ್ಲಿ ಶೇಖರಿಸಿಟ್ಟಿದ್ದು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಉದ್ಯಾನವನಗಳಲ್ಲಿ ಯಾವುದೇ ಕಟ್ಟಡ ಕಟ್ಟಬಾರದೆಂಬ ಸ್ಪಷ್ಟ ಆದೇಶವಿದ್ದರೂ ಇಲ್ಲಿ ಉಲ್ಲಂಘಿಸಲಾಗಿದೆ ಎಂದು ದೂರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement