ವಿವಿಧ ಸ್ಪರ್ಧೆ ವಿಜೇತರು
ಮೈಸೂರು: ಮೃಗಾಲಯದಲ್ಲಿ ನಡೆದ ಚಿತ್ರ ಬಿಡಿಸುವ ಹಾಗೂ ಪಕ್ಷಿಗಳ ಗುರುತುಸುವಿಕೆ ಸ್ಪರ್ಧೆಯಲ್ಲಿ ಈ ಕೆಳಕಂಡ ಶಾಲಾ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಚಿತ್ರ ಬಿಡಿಸುವ ಸ್ಪರ್ಧೆ: ಕೆ. ವಿಶಾಲ್, ಇ. ಚಿನ್ಮಯ್ (ರೋಟರಿ ವೆಸ್ಟ್ ಮದರ್ಸ್ ಅ್ಯಂಡ್ ಡೆಫ್ ಚಿಲ್ಡ್ರನ್ಸ್ ಶಾಲೆ, ಬೋಗಾದಿ), ಕೆ.ಪಿ. ಪೂಜಾಶ್ರೀ, (10ನೇ ತರಗತಿ, ಜೆಎಸ್‌ಎಸ್ ಪ್ರೌಢಶಾಲೆ, ಸರಸ್ವತಿಪುರಂ), ಜಿ.ಬಿ. ವರ್ಷಿಣಿ (ರೋಟರಿ ವೆಸ್ಟ್ ಮದರ್ಸ್ ಅ್ಯಂಡ್ ಡೆಫ್ ಚಿಲ್ಡ್ರನ್ಸ್ ಶಾಲೆ, ಬೋಗಾದಿ).
ಪಕ್ಷಿ ಗುರುತಿಸುವಿಕೆ ಸ್ಪರ್ಧೆ: ಜಿ. ಪ್ರಶಾಂತ್ (ತೃತೀಯ ಬಿ.ಎಸ್ಸಿ, ಯುವರಾಜ ಕಾಲೇಜ್), ಜಿ.ಪಿ. ಪ್ರಶಾಂತ್ (ಪ್ರಥಮ ಎಂ.ಎಸ್ಸಿ, ಪ್ರಾಣಿಶಾಸ್ತ್ರ, ಮಾನಸಗಂಗೋತ್ರಿ), ಎಂ. ಪ್ರದೀಪ್ (ಪ್ರಥಮ ಎಂ.ಎಸ್ಸಿ, ಪ್ರಾಣಿಶಾಸ್ತ್ರ, ಮಾನಸಗಂಗೋತ್ರಿ), ಎಸ್. ಅರ್ಜುನ್ (ದ್ವಿತೀಯ ಪಿಯುಸಿ, ವಿಜಯವಿಠ್ಠಲ ಪಿಯು ಕಾಲೇಜ್). ಮೃಗಾಲಯದಲ್ಲಿ ಜೂ. 5ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ನಾಲ್ವಡಿ ಭಾವಚಿತ್ರ ವಿತರಣೆ
ಮೈಸೂರು: ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರ ಹಾಗೂ ಮೈಸೂರು ಸಂಸ್ಥಾನದ ಕುರಿತ ಮಾಹಿತಿ ಇರುವ ಕೈಪಿಡಿಯನ್ನು ಶಾಲಾ- ಕಾಲೇಜುಗಳಿಗೆ ವಿತರಿಸಲಾಗುವುದು ಎಂದು ಪಾತಿ ಫೌಂಡೇಷನ್ ಅಧ್ಯಕ್ಷರಾದ ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಹೇಳಿದರು. ಮೈಸೂರು ಸಂಸ್ಥಾನದ ಅಭಿವೃದ್ಧಿ ಹರಿಕಾರ ಎಂದೇ ಪ್ರಸಿದ್ಧಿ ಪಡೆದಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 129ನೇ ಜಯಂತಿ ಅಂಗವಾಗಿ 150 ಭಾವಚಿತ್ರಗಳು ಹಾಗೂ 2 ಸಾವಿರ ಕೈಪಿಡಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ಭಾವಚಿತ್ರವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ನೀಡಿದ್ದೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ಅಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ ಅವರ ಜಯಂತಿಯನ್ನು ದಸರೆಯ ರೀತಿಯಲ್ಲಿ ಆಚರಿಸಬೇಕಾದದು ಮೈಸೂರಿಗರ ಕರ್ತವ್ಯ. ರಾಜರ್ಷಿ ತೋರಿಸಿಕೊಟ್ಟ ಅಭಿವೃದ್ಧಿಯ ಮಂತ್ರ ಇಂದಿಗೂ ಅನುಕರಣೀಯ ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್, ಪತ್ರಕರ್ತ ಶಿವಶಂಕರಸ್ವಾಮಿ, ಮುಖಂಡರಾದ ಮಧುವನ ಚಂದ್ರು, ಹರ್ಷ ಇದ್ದರು.