ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

1.5 ಕೋಟಿ ವೆಚ್ಚದಲ್ಲಿ ಬಾಬೂಜಿ ಭವನ

Rashmi Kasaragodu
Updated On : 7 Jun 2013, 12:25 pm

ಕುಪ್ಪೆ ಮಹದೇವಸ್ವಾಮಿ
ಕ.ಪ್ರ.ವಾರ್ತೆ   ಕೆ.ಆರ್. ನಗರ   ಜೂ. 6
ಇಲ್ಲಿನ ಪಿಎಲ್ಡಿ ಬ್ಯಾಂಕ್ ಬಳಿ ನಿರ್ಮಿಸುತ್ತಿರುವ ಬಾಬು ಜಗಜೀವನರಾಂ ಸಮುದಾಯ ಭವನದ ಭರದಿಂದ ಸಾಗಿದ್ದು, ಅಂದಾಜು ಒಂದೂವರೆ ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಭವನಕ್ಕೆ ಈಗಾಗಲೇ ಸರ್ಕಾರದಿಂದ 56 ಲಕ್ಷ ಹಣ ಬಿಡುಗಡೆಯಾಗಿದೆ.
ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರಿಗೆ ವಹಿಸಲಾಗಿದ್ದು, ಈಗಾಗಲೇ ಅಡಿಪಾಯದ ಕಾಮಗಾರಿ ಸಮರೋಪಾದಿಯಲ್ಲಿ ನಡೆದಿದ್ದು, ಜನವರಿ ತಿಂಗಳಾಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆಯಲ್ಲದೆ, ಇದರಿಂದ ಮಾದಿಗ ಸಮಾಜದ 14 ವರ್ಷಗಳ ಕನಸು ನನಸಾಗುತ್ತಿದೆ.
85 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಕಾಮಗಾರಿಗೆ ಈಗ 56 ಲಕ್ಷ ಹಣ ಬಿಡುಗಡೆಯಾಗಿದ್ದು, ಅವಶ್ಯವಿರುವ ಮತ್ತಷ್ಟು ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವುದರ ಜತೆಗೆ ವೈಯುಕ್ತಿಕವಾಗಿ ಧನಸಹಾಯ ಮಾಡುವುದಾಗಿ ಶಾಸಕ ಸಾ.ರಾ. ಮಹೇಶ್ ಭರವಸೆ ನೀಡಿದ್ದಾರೆ.
ಆರು ತಿಂಗಳ ಹಿಂದೆ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದರಾದರೂ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿತ್ತು. ನಂತರ ತಿಂಗಳ ಹಿಂದೆ ಚಾಲನೆ ನೀಡಿ ಶರವೇಗದಲ್ಲಿ ಕಾಮಗಾರಿ ನಡೆಸುತ್ತಿದ್ದು, ಭವನ ಪೂರ್ಣಗೊಂಡ ನಂತರ ಸಮಾಜದ ಬಾಂಧವರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಭವನದ ಕಾಮಗಾರಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿರುವ ಶಾಸಕರಿಗೆ ಮತ್ತು ಇದಕ್ಕೆ ಸಹಕಾರ ನೀಡಿರುವ ಚುನಾಯಿತ ಜನ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಸಮಾಜದ ಮುಖಂಡರಾಗಿರುವ ಮಾಜಿ ಪುರಸಭಾಧ್ಯಕ್ಷ ಡಿ. ಕಾಂತರಾಜು ಸಮುದಾಯ ಭವನ ನಿರ್ಮಾಣಕ್ಕೆ ಸರ್ವರು ತಮ್ಮ ಸಹಕಾರ ನೀಡಬೇಕೆಂದು ಕೋರಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement