ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉಚಿತ ವೈದ್ಯಕೀಯ ಶಿಬಿರ ಯಶಸ್ವಿ

Rashmi Kasaragodu
Updated On : 7 Jun 2013, 12:23 pm

ಮೈಸೂರು: ರಾಮಕೃಷ್ಣ ಸೇವಾ ಸಂಘ ಹಾಗೂ ಬೆಂಗಳೂರಿನ ಪ್ರಿಸ್ಟಿನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾ ಕೇಂದ್ರದಲ್ಲಿ ವೈದ್ಯಕೀಯ ಉಚಿತ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ರಾಮಕೃಷ್ಣ ಆಶ್ರಮದ ಸ್ವಾಮಿ ಪರಹಿತಾನಂದಜೀ ಅವರು ಉದ್ಘಾಟಿಸಿದರು. ಮೂಳೆ ತಜ್ಞರಾದ ಡಾ. ಎಚ್.ಎಂ. ಪ್ರಸನ್ನ, ಡಾ. ಧನಂಜಯ ಹಾಗೂ ನರರೋಗ ತಜ್ಞರಾದ ಡಾ. ಅನಂತ ಕಿಶನ್ ತಂಡದವರು ರೋಗಿಗಳನ್ನು ಪರೀಕ್ಷಿಸಿದರು ಎಂದು ಸಂಘದ ಅಧ್ಯಕ್ಷ ಎಂ. ಪಾಪೇಗೌಡ ತಿಳಿಸಿದ್ದಾರೆ.

ನಾಟಕ ವಾಚನ
ಮೈಸೂರು: ನಗರದ ಕಲಾಸುರುಚಿಯು ಜೂ. 8ರ ಸಂಜೆ 7ಕ್ಕೆ ಕುವೆಂಪುನಗರ ಚಿತ್ರಭಾನು ರಸ್ತೆಯ ಸುರುಚಿ ರಂಗಮನೆಯಲ್ಲಿ ನಾಟಕ ವಾಚನ ಕಾರ್ಯಕ್ರಮ ಏರ್ಪಡಿಸಿದೆ. ಎಸ್.ಕೆ. ಸುಬ್ಬಣ್ಣ ಅವರ ಸಹದೇವನ ಗುಟ್ಟು ನಾಟಕ ವಾಚನ ನಡೆಯುವುದು. ಅದೇ ದಿನ ಸಂಜೆ 4.30ಕ್ಕೆ ನಡೆಯುವ ಕಥೆ ಕೇಳೋಣ ಬನ್ನಿ ಕಾರ್ಯಕ್ರಮದಲ್ಲಿ ಎಂಜಿನಿಯರ್ಸ್ ಇಂಡಿಯಾ ಸಂಸ್ಥೆಯ ನಿವೃತ್ತ ಉಪ ಮಹಾಪ್ರಬಂಧಕ ಎಸ್. ಜಗನ್ನಾಥ್ ಅವರು ಕಥೆ ಹೇಳಿಕೊಡುವರು. ಹೆಚ್ಚಿನ ಮಾಹಿತಿಗೆ 2541795 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement