ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಐಐಟಿ ಪ್ರವೇಶ ಪರೀಕ್ಷೆ: ನಿಮಿಷ್ಗೆ 11ನೇ ರ್ಯಾಂಕ್

Rashmi Kasaragodu
Updated On : 6 Jun 2013, 11:20 am

ಮೈಸೂರು: ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಮೈಸೂರಿನ ವಿದ್ಯಾರ್ಥಿ ಡಿ. ನಿಮಿಷ್ ಅವರು 11ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದು, ಇವರಿಗೆ ಪ್ರತಿಷ್ಠಿತ ಕಾನ್ಪುರ ಐಐಟಿಯಲ್ಲಿ ಎಂ.ಎಸ್ಸಿ ಭೌತಶಾಸ್ತ್ರ ಪ್ರವೇಶಕ್ಕೆ ಅವಕಾಶ ಸಿಕ್ಕಿದೆ.
ನಿಮಿಷ್ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ (ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಿತ) ಅಂತಿಮ ವರ್ಷ ವಿದ್ಯಾರ್ಥಿ. ಇವರು ತಂದೆ ದ್ವಾರಕನಾಥ್, ತಾಯಿ ರೇಣುಕಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೈಸೂರಿನ ಜೆ.ಪಿ. ನಗರದಲ್ಲಿರುವ ಅಜ್ಜಿ ಮನೆಯಲ್ಲಿ ಉಳಿದುಕೊಂಡು ನಿಮಿಷ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
1 ರಿಂದ 10ನೇ ತರಗತಿವರೆಗೆ ಡೆಮಾಸ್ಟ್ರೇಷನ್ ಶಾಲೆಯಲ್ಲಿ (ಸಿಬಿಎಸ್ಇ) ಓದಿರುವ ನಿಮಿಷ್, 10ನೇ ತರಗತಿಯಲ್ಲಿ ಶೇ.74 ಅಂಕ ಪಡೆದಿದ್ದರು. ಐಐಟಿಯಲ್ಲಿ ಪದವಿಗೆ ಸೇರಬೇಕೆಂಬ ಕಾರಣಕ್ಕಾಗಿ ಹೈದರಾಬಾದ್ನಲ್ಲಿರುವ ನಾರಾಯಣ ಕಾಲೇಜಿನಲ್ಲಿ 11 ಮತ್ತು 12ನೇ ತರಗತಿ ಓದಿದ್ದು, 12ನೇ ತರಗತಿಯಲ್ಲಿ ಶೇ. 84 ಅಂಕ ಪಡೆದಿದ್ದರು. ಆದರೆ, ಐಐಟಿಗೆ ಬಿ.ಎಸ್ಸಿ ಸೇರಲು ಪ್ರವೇಶ ಪರೀಕ್ಷೆ ಎದುರಿಸಿ ವಿಫಲರಾಗಿದ್ದರು. ಹೀಗಾಗಿ, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಎಸ್ಪಿಗೆ ಸೇರಿದ್ದರು. ಆದರೆ, ಐಐಟಿಗೆ ಸೇರುವ ಪ್ರಯತ್ನ ಮಾತ್ರ ಬಿಡಲಿಲ್ಲ. ಎಂ.ಎಸ್ಸಿ ಭೌತಶಾಸ್ತ್ರಕ್ಕೆ ಸೇರುವ ಸಲುವಾಗಿ ಐಐಟಿ ಪರೀಕ್ಷೆ ಎದುರಿಸಿದ ನಿಮಿಷ್, 11ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಯುವರಾಜ ಕಾಲೇಜು ಭೌತಶಾಸ್ತ್ರ ಸಹ ಪ್ರಾಧ್ಯಾಪಕರಾದ ಡಾ. ಸ್ವರ್ಣಮಾಲ ಶಿರಸಿ, ಡಾ.ಡಿ. ಕೃಷ್ಣೇಗೌಡ ಅವರು ಐಐಟಿ ಪರೀಕ್ಷೆ ಎದುರಿಸಲು ನಿಮಿಷ್ ಅವರಿಗೆ ಅಗತ್ಯ ಮಾರ್ಗದರ್ಶನ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement