ಕಾವಲು ಸಮಿತಿ ಬಲವರ್ಧನೆ ಅಗತ್ಯ
ಕ.ಪ್ರ.ವಾರ್ತೆ ಮೈಸೂರು ಜೂ. 6
ಹಳ್ಳಿಯ ಹೆಣ್ಣು ಮಕ್ಕಳಲ್ಲಿ ಶಿಕ್ಷಣ, ಸ್ವಾತಂತ್ರ್ಯ, ಘನತೆ ಹಾಗೂ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವ ಸಾಮರ್ಥ್ಯ ಹೆಚ್ಚಿಸಬೇಕಾದರೆ ಒಡನಾಡಿ ರೂಪಿಸುತ್ತಿರುವ ಕಾವಲು ಸಮಿತಿಗಳ ಬಲವರ್ಧನೆ ಅತ್ಯಗತ್ಯ ಎಂದು ತಾಲೂಕಿನ ಹೊಸಹಳ್ಳಿ ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಅಭಿಪ್ರಾಯಪಟ್ಟರು.
ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ವತಿಯಿಂದ ಹೊಸಹಳ್ಳಿಯ ಶಾಲಾ ಆವರಣದಲ್ಲಿ ನಡೆದ ಕಾವಲು ಸಮಿತಿಯ ಬಲವರ್ಧನಾ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಕೈಜೋಡಿಸುವ ಕಾರ್ಯ ಪ್ರತಿಯೊಬ್ಬ ನಾಗರಿಕನಿಂದ ನಡೆಯಬೇಕಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಲಾ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಶಿವಯ್ಯ, ಸದಸ್ಯ ವಾಸು ಮಾತನಾಡಿದರು. ಸಂಸ್ಥೆಯ ಯೋಜನಾ ಸಂಯೋಜಕ ಟಿ.ಸಿ. ರಘು, ಕ್ಷೇತ್ರ ಕಾರ್ಯಕರ್ತರಾದ ಜ್ಯೋತಿ, ಗಾಯಿತ್ರಿ, ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.