ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಎಚ್.ಡಿ. ಕೋಟೆ ಜೂ. 6
ರಾಜ್ಯದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿ ತಾಲೂಕು ವಿಶ್ವ ಹಿಂದು ಪರಿಷತ್, ಭಜರಂಗ ದಳದ ಕಾರ್ಯಕರ್ತರು ಪ್ರತಿಭಟಿಸಿದರು.
ದೇಶದಲ್ಲಿ ಗೋವಿಗೆ ಪೂಜನೀಯ ಸ್ಥಾನ ನೀಡಿದೆ. ನಮ್ಮ ದೇಶ ಕೃಷಿ ಪ್ರದಾನ ದೇಶವಾಗಿದ್ದು, ಗೋವುಗಳು ಕೃಷಿಗೆ ಆಧಾರವಾಗಿದೆ. ಆದರೂ ನಮ್ಮಲ್ಲಿ ಗೋಹತ್ಯೆ ನಿರಂತರವಾಗಿ ಸಾಗುತ್ತಿದೆ. ಹಾಗೂ ನೆರೆಯ ರಾಜ್ಯದ ಕಸಾಯಿಖಾನೆಗೆ ಸಾಗಾಣಿಕೆಯಾತ್ತಿದೆ. ಇದೇ ರೀತಿ ಮುಂದುವರಿದರೆ ದೇಶದಲ್ಲಿ ಗೋವುಗಳ ಸಂತತಿಯು ನಾಶವಾಗುತ್ತದೆ. ಆದ್ದರಿಂದ ಸರ್ಕಾರವು ಗೋಹತ್ಯೆ ನಿಷೇದ ಕಾಯ್ದೆಯನ್ನು ಕಟ್ಟುನಿಟ್ಟಾಗಿ ತರುವುದರ ಮೂಲಕ, ರಾಷ್ಟ್ರದಲ್ಲಿ ಗೋವುಗಳ ಸಂತತಿ ಉಳಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಸಂಚಾಲಕ ಮೈ.ಕ. ಪ್ರೇಮ್ಕುಮಾರ್, ಮಹದೇವಪ್ಪ, ವಿನಯ್ಶೆಟ್ಟಿ, ರವಿ, ಚಿನ್ನಪ್ಪ, ರಾಮು, ನವೀನ್, ಚನ್ನನಾಯಕ, ಗಿರೀಶ್, ಮಹದೇವ್, ರವೀಶ್, ಹನು, ರಮೇಶ್, ಅನಿಲ ಭಾಗವಹಿಸಿದ್ದರು.