'ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ಮಾಡಿ'
ಕ.ಪ್ರ.ವಾರ್ತೆ ಮೈಸೂರು ಜೂ. 6
ಪರಿಸರ ಸಂರಕ್ಷಿಸಲು ಯುವಕರು ಪ್ರತಿಜ್ಞೆ ಮಾಡಬೇಕೆಂದು ವಿದ್ಯಾವಿಕಾಸ್ ಸಂಸ್ಥೆಯ ಕಾರ್ಯದರ್ಶಿ ವಿ. ಕವೀಶ್ಗೌಡ ಹೇಳಿದರು.
ಹೆಬ್ಬಾಳ್ ಒಂದನೇ ಹಂತದ ನವಭಾರತ ನಿರ್ಮಾಣ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಜಯನಗರ ಬಡಾವಣೆಯ ಹಿರಿಯ ನಾಯಕ ಇಂದ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಪರಿಸರವಾದಿ ಹಾಗೂ ರಘುಲಾಲ್ ಮತ್ತು ಕಂಪನಿಯ ಮಾಲೀಕ ಎನ್. ರಾಘವನ್ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಕೆ.ವಿ. ಶ್ರೀಧರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸುವ ಒಂದು ಜಾಗೃತಿ ಆಂದೋಲನ ದೇಶದಲ್ಲಿ ನಿರಂತರವಾಗಿ ಸಾಗದಿದ್ದರೆ ಈ ದೇಶದ ಪರಿಸರಕ್ಕೆ ಭಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ತಿಳಿಸಿದರು.
ಕೃಷ್ಣದೇವರಾಯ ವೃತ್ತ, ವಿಜಯನಗರ 2ನೇ ಹಂತ, ಹೈಟೆನ್ಷನ್ ರಸ್ತೆ ಬದಿಯಲ್ಲಿ ಹಾಗೂ ಉದ್ಯಾನವನಗಳಲ್ಲಿ ಗಿಡಗಳನ್ನು ನೆಡಲಾಯಿತು.
ಟ್ರಸ್ಟ್ ಪದಾಧಿಕಾರಿಗಳಾದ ಜೆ.ಕೆ. ಯೋಗೇಶ್, ಸಿ.ಎಂ. ಕೃಷ್ಣ, ಸಂಜು, ಸಂತೋಷ್, ಸುಜಿತ್, ನಾಗೇಂದ್ರ ಇದ್ದರು.