ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಿಂಚಣಿ ಯೋಜನೆ ಬದಲಾವಣೆಯಾಗಲಿ

Rashmi Kasaragodu
Updated On : 7 Jun 2013, 12:26 pm

ಕ.ಪ್ರ.ವಾರ್ತೆ   ಮೈಸೂರು   ಜೂ. 6
ಪ್ರಸ್ತುತ ಜಾರಿಯಲ್ಲಿರುವ ಕಾರ್ಮಿಕರ ಪಿಂಚಣಿ ಯೋಜನೆಯ ಅಮೂಲಾಗ್ರಹ ಬದಲಾವಣೆ ಅವಶ್ಯಕ ಎಂದು ಇಪಿಎಫ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮಹಾಮಂಡಳದ ಕಾನೂನು ಸಲಹೆಗಾರ ರಾಜಶೇಖರ ಕೋಪರ್ಡೆ ಹೇಳಿದರು.
ಸಾರಿಗೆ ಸಂಸ್ಥೆಗಳ ನೌಕರರ ಮತ್ತು ನಿವೃತ್ತ ನೌಕರರ ಸಂಘಗಳ ಕ್ಷೇಮಾಭಿವೃದ್ಧಿ ಮಹಾಮಂಡಳ ಹಾಗೂ ಇಪಿಎಫ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮಹಾಮಂಡಳ ಸಂಯುಕ್ತವಾಗಿ ಗುರುವಾರ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಕಾರ್ಮಿಕರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಪಿಂಚಣಿ ಕೊಡುವಾಗ ಪ್ರತಿವರ್ಷ ತುಟ್ಟಿಭತ್ಯೆ ಸೇರಿಸಿ ಕೊಡುತ್ತಾರೆ. ಆದರೆ, ಕಾರ್ಮಿಕರ ಪಿಂಚಣಿಗೆ ಇಂತಹ ಯಾವುದೇ ರೀತಿ ತುಟ್ಟಿಭತ್ಯೆ ನೀಡಲಾಗುತ್ತಿಲ್ಲ. ಇತ್ತೀಚೆಗೆ ಮಾಸಿಕ 1600 ಪಿಂಚಣಿ ಪಡೆಯುವ ಕಾರ್ಮಿಕರು ಕುಟುಂಬ ನಿರ್ವಹಿಸಲು ಸಾಧ್ಯವಾಗದು. ಆದ್ದರಿಂದ ಕಾರ್ಮಿಕರ ಪಿಂಚಣಿ ಯೋಜನೆ ಬದಲಾವಣೆ ಅವಶ್ಯಕ ಎಂದರು.
ಕಾರ್ಮಿಕ ಪಿಂಚಣಿ ಯೋಜನೆಯ ಪ್ರಕಾರ 20 ವರ್ಷಗಳ ಕಾಲ ಪಿಂಚಣಿ ವಂತಿಕೆ ಸಲ್ಲಿಸಿದ ಕಾರ್ಮಿಕರಿಗೆ 2 ವರ್ಷಗಳ ಸೇವಾವಧಿ ಪರಿಗಣಿಸಿ ಪಿಂಚಣಿ ನಿಗದಿಪಡಿಸಬೇಕು. ಆದರೆ, ಸದರಿ ಸೌಲಭ್ಯವನ್ನು ನಿವೃತ್ತ ಕಾರ್ಮಿಕರಿಗೆ ನೀಡುತ್ತಿಲ್ಲ. ನ್ಯಾಯಾಲದ ಆದೇಶವಿದ್ದರೂ ಪಿಂಚಣಿ ಅಧಿಕಾರಿಗಳು ಇದನ್ನು ಅನುಷ್ಠಾನಗೊಳಿಸುತ್ತಿಲ್ಲ ಎಂದು ಆರೋಪಿಸಿದರು.
ಇತ್ತೀಚಿನ ದಿನಗಳಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಶಾಸಕರು ತಮ್ಮ ಸಂಬಳ, ಭತ್ಯೆ, ಪಿಂಚಣಿ ಹಾಗೂ ಇತರೆ ವೆಚ್ಚ ದುಪ್ಪಟ್ಟು ಮಾಡಿಕೊಂಡಿದ್ದು, ದುಡಿಯುವ ಕಾರ್ಮಿಕರಿಗೆ ಪಿಂಚಣಿ ಹಚ್ಚಳ ಮಾಡದೆ ಮಲತಾಯಿ ಧೋರಣೆ ಅಸುಸರಿಸುತ್ತಿದ್ದಾರೆ ಎಂದು ಟೀಕಿಸಿದರು.  
ಕೇಂದ್ರ ಸರ್ಕಾರ ಕಾರ್ಮಿಕರ ಪಿಂಚಣಿದಾರರ ಪರವಾಗಿ ಯಾವುದೇ ದೃಢ ನಿಲುವು ತಾಳದೆ ಇರುವುದನ್ನು ಗಮನಿಸಿ ಮಹಾಮಂಡಳವು ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಶಕ್ತಿ ದಾವೆ ಹೂಡಿದೆ ಎಂದ ಅವರು, ಮಹಾಮಂಳದ ಸದಸ್ಯನಾಗಿ ನಿಧನರಾದ ಅವರ ಕುಟುಂಬದವರಿಗೆ ಮರಣ ನೆರವು ನಿಧಿಯಿಂದ 2 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಮಹಾಮಂಡಳದ ಅಧ್ಯಕ್ಷ ಬಿ.ಎಸ್. ಇಂಗಳೆ, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹಾಜನ, ಸಂಘಟನಾ ಕಾರ್ಯದರ್ಶಿ ಎಚ್.ಎಂ. ಮಾರುತಿರಾವ್ ರಾಯ್ಕರ್, ಮುಖಂಡರಾದ ಎಂ. ಮಲ್ಲಯ್ಯ, ಕೆ.ಪಿ. ಮಂದಾಲ, ಟಿ.ಕೆ. ದೇವಕತ್ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement