ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಿಂಗರಾಜು ನ್ಯಾಯಾಂಗ ಬಂಧನಕ್ಕೆ

Rashmi Kasaragodu
Updated On : 7 Jun 2013, 12:36 pm

ಕ.ಪ್ರ.ವಾರ್ತೆ   ಮೈಸೂರು   ಜೂ. 6
ಉದ್ಯಮಿ ಪ್ರಭಾಕರ್ ಶೆಟ್ಟಿ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಲಿಂಗರಾಜುನನ್ನು ಪೊಲೀಸರು ಗುರುವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ
ಒಪ್ಪಿಸಿದ್ದಾರೆ.
ಬಂಧಿತ ಲಿಂಗರಾಜುನನ್ನು ಪೊಲೀಸರು ಎರಡು ದಿನ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು, ಆತನಿಂದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಆ ಸುಳಿವಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಲಿಂಗರಾಜು ಸಹಚರರಾದ ಸುರೇಶ್ ಮತ್ತು ಶಿವು ಎಂಬವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. 5 ಲಕ್ಷ ಸುಪಾರಿ ಪಡೆದು ಪ್ರಭಾಕರ್ ಶೆಟ್ಟಿ ಅವರನ್ನು ಅಪಹರಿಸಿದ್ದ 6 ಮಂದಿ ತಂಡಕ್ಕಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
10 ರಿಂದ 1 ಕೋಟಿ ಚೌಕಾಸಿ: ಪ್ರಭಾಕರ್ ಶೆಟ್ಟಿ ಅವರನ್ನು ಭಾನುವಾರ ಅಪಹರಿಸಿದ ಬಳಿಕ ಲಿಂಗರಾಜು 10 ಕೋಟಿ ಬೇಡಿಕೆ ಇಟ್ಟಿದ್ದ. ಇದಕ್ಕೆ ಶೆಟ್ಟಿ ಅವರು ಒಪ್ಪಲಿಲ್ಲ. ಲಿಂಗರಾಜು ಮತ್ತು ಶೆಟ್ಟಿ ನಡುವೆ ಹಲವು ಸುತ್ತಿನ ಚೌಕಾಸಿ ನಡೆದು, ಅಂತಿಮವಾಗಿ 1 ಕೋಟಿ ನೀಡಲು ಲಿಂಗರಾಜು ಒತ್ತಡ ಹೇರಿದ್ದ. ಇದಕ್ಕೆ ಶೆಟ್ಟಿ ಅವರು ಒಪ್ಪಿರಲಿಲ್ಲ. ಬದಲಿಗೆ ತನ್ನ ಬಳಿ ಪಡೆದಿರುವ ಸಾಲ ಮನ್ನಾ ಮಾಡುವುದಾಗಿ
ಹೇಳಿದ್ದಾರೆ.
ಆದರೆ, ಇದಕ್ಕೆ ಲಿಂಗರಾಜು ಒಪ್ಪಿರಲಿಲ್ಲ. ಸೋಮವಾರ ಮುಂಜಾನೆ ಪ್ರಭಾಕರ್ ಶೆಟ್ಟಿ ತಪ್ಪಿಸಿಕೊಂಡಿದ್ದರಿಂದ ಎಲ್ಲವು ಉಲ್ಟಾಪಲ್ಟಾ ಆಗಿದೆ. ಈಗ ಲಿಂಗರಾಜು ಮತ್ತು ಆತನ ಇಬ್ಬರು ಸಹಚರರು ಪೊಲೀಸರ ಅತಿಥಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement