12ರಂದು ಸಾಲಿಗ್ರಾಮದಲ್ಲಿ ಸಿಜಿಬಿ ಶಾಖೆ ಆರಂಭ
ಸಾಲಿಗ್ರಾಮ: ಸಾಲಿಗ್ರಾಮದಲ್ಲಿ ಜೂ. 12 ರಂದು ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾರಂಭವಾಗಲಿದೆ ಎಂದು ಶಾಖಾ ವ್ಯವಸ್ಥಾಪಕರಾದ ಬಿ. ವಿಶ್ವಾಸ್ ಹೇಳಿದರು. ನೂತನ ಶಾಖೆಯಲ್ಲಿ ಠೇವಣಿ ಯೋಜನೆಗಳು, ಉಳಿತಾಯ ಖಾತೆಗಳು, ಹಿರಿಯ ನಾಗರಿಕರಿಗೆ 0.50 ಹೆಚ್ಚು ಬಡ್ಡಿ ನೀಡಲಾಗುವುದು. ಕೃಷಿಸಾಲ, ಗೃಹ ನಿರ್ಮಾಣ ಸಾಲ, ಕೈಗಾರಿಕಾ ಅಭಿವೃದ್ಧಿ ಸಾಲ, ಸಣ್ಣ ಉದ್ದಿಮೆ ಮತ್ತು ವ್ಯಾಪಾರಸ್ಥರಿಗೆ ಸಾಲ, ವಾಹನಗಳ ಸಾಲ, ವಿದ್ಯಾಭ್ಯಾಸಕ್ಕಾಗಿ ಸಾಲ, ವೈಯಕ್ತಿಕ ಸಾಲ ಇತ್ಯಾದಿ ಸೌಲಭ್ಯ ನೀಡಲಾಗುವುದು. ಸಾರ್ವಜನಿಕರು ನೂತನ ಶಾಖೆಯಲ್ಲಿ ಖಾತೆ ತೆರೆಯುವುದರ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ವ್ಯವಹರಿಸಿ ಸದುಪಯೋಗ ಪಡೆದುಕೊಳ್ಳುವಂತೆ ಶಾಖಾ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.