ಓಡಬ್ಲ್ಯೂಐನಿಂದ ಎನ್ಐಇ ವಿದ್ಯಾರ್ಥಿಗಳಿಗೆ ಆಹ್ವಾನ
ಕ.ಪ್ರ.ವಾರ್ತೆ ಮೈಸೂರು ಜೂ. 7
ಜರ್ಮನಿ ವಿಶ್ವವಿದ್ಯಾನಿಲಯದ ಒಡಬ್ಲ್ಯೂಐ ಸಂಸ್ಥೆಯು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತರಬೇತಿ ನೀಡಲು ಆಹ್ವಾನಿಸಿದೆ. ಜೂನ್ನಿಂದ ಆಗಸ್ಟ್ವರೆಗೆ 8 ವಾರಗಳ ತರಬೇತಿ ನೀಡಲಿದ್ದು, ಕಾಲೇಜಿನ ಐದು ವಿದ್ಯಾರ್ಥಿಗಳು ತೆರಳಿಲಿದ್ದಾರೆ. ಆಯ್ಕೆಯಾದ ಜೀವನ್ದಾಸ್, ಕಾರ್ತಿಕ್ ಕಶ್ಯಪ್, ಸಚಿನ್, ಅಭಿಷೇಕ್ ಶೆಟ್ಟಿ, ಆಶೀಶ್ ಭಟ್ ಅವರನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು. ಎನ್ಐಇ ಆಡಳಿತ ಸಂಸ್ಥೆಯ ಅದ್ಯಕ್ಷ ಎಸ್.ಆರ್. ಸುಬ್ಬರಾವ್, ಗೌರವ ಕಾರ್ಯದರ್ಶಿ ಎಸ್.ಎಲ್. ರಾಮಚಂದ್ರ, ಖಜಾಂಚಿ ಎಸ್.ಕೆ. ಲಕ್ಷ್ಮೀನಾರಾಯಣ, ಪ್ರಾಂಶುಪಾಲ ಡಾ.ಜಿ.ಎಲ್. ಶೇಖರ್, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಎನ್.ವಿ. ರಾಘವೇಂದ್ರ, ಒಡಬ್ಲ್ಯೂಐ ವ್ಯವಸ್ಥಾಪಕ ನಿರ್ದೇಶಕ ಡಾ. ಕಲೂಸ್ ಲೂಕಾ ಇದ್ದರು.