ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಟನಹಳ್ಳಿಯಲ್ಲಿ ಗ್ರಾಪಂ ಸದಸ್ಯನ ಮೇಲೆ ಹಲ್ಲೆ

Rashmi Kasaragodu
Updated On : 7 Jun 2013, 11:41 am

ಕ.ಪ್ರ.ವಾರ್ತೆ   ಸಾಲಿಗ್ರಾಮ್ಣ ಜೂ. 7
ಸಮೀಪದ ನಾಟನಹಳ್ಳಿ ಗ್ರಾಮದಲ್ಲಿ ಚರಂಡಿ ನಿರ್ಮಾಣವಾಗಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಗ್ರಾಪಂ ಸದಸ್ಯೆ ಪತಿಯ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಗುರುವಾರ ಜರುಗಿದೆ.
ಗ್ರಾಮದ ಗ್ರಾಪಂ ಸದಸ್ಯೆ ರೂಪಾ ಅವರ ಪತಿ ಶೇಖರ್ ಹಲ್ಲೆಗೊಳಗಾಗಿರುವ ವ್ಯಕ್ತಿ. ಗುರುವಾರ ಬೆಳಗ್ಗೆ ಇವರ ಚಿಕ್ಕಪ್ಪನ ಪುತ್ರ ಮಲ್ಲೇಶ್ ಎಂಬ ವ್ಯಕ್ತಿ ನಮ್ಮ ಮನೆಯ ಮುಂದೆ ಚರಂಡಿಯನ್ನು ನಿರ್ಮಾಣ ಮಾಡಿಲ್ಲವೆಂದು ಶೇಖರ್ ಮೇಲೆ ವಿನಾಕಾರಣ ಜಗಳ ತೆಗೆದಿದ್ದಾರೆ. ಆ ಸಮಯದಲ್ಲಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಈ ನಡುವೆ ಮಲ್ಲೇಶ್ ಹಾಸನದಲ್ಲಿರುವ ತನ್ನ ಭಾವಮೈದುನನಿಗೆ ದೂರವಾಣಿ ಕರೆ ಮಾಡಿ, ಅಲ್ಲಿಂದ 9 ಜನರನ್ನು ಕಾರಿನಲ್ಲಿ ಗ್ರಾಮಕ್ಕೆ ಕರೆ ತಂದು, ಶೇಖರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಶೇಖರ್ ತಾಯಿ ಭಾಗ್ಯಮ್ಮ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ಭೇರ್ಯದ ಸಂತೆಯಲ್ಲಿದ್ದ ನಾರಾಯಣ ಶೆಟ್ಟರು ಮೇಲೆ ಹಲ್ಲೆ ನಡೆಸಲು ಹೋದ ಸಮಯದಲ್ಲಿ, ಸಾಲಿಗ್ರಾಮದ ಎಸ್ಐ ಹರೀಶ್ ನೇತೃತ್ವದ ತಂಡವು ಆರೋಪಿಗಳಾದ ಮಲ್ಲೇಶ್, ಯಶವಂತ, ಮಂಜುನಾಥ, ವಿನಯ್, ಪುಟ್ಟರಾಜು, ಶ್ರೀಧರ, ಸತೀಶ್, ಪ್ರೇಮ್ಕುಮಾರ್, ವಿ. ಮಂಜುನಾಥನನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾಗಿದ್ದ ಶೇಖರ್ ಸಾಲಿಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement