ಲಯನ್ಸ್ ಐಕಾನ್ಗೆ ಪದಾಧಿಕಾರಿಗಳ ಆಯ್ಕೆ
ಕ.ಪ್ರ.ವಾರ್ತೆ ಮೈಸೂರು ಜೂ. 7
ಲಯನ್ಸ್ ಕ್ಲಬ್ ಆಫ್ ಮೈಸೂರು ಐಕಾನ್ ಸಂಸ್ಥೆಯ 2013- 14ನೇ ಸಾಲಿನ ಅಧ್ಯಕ್ಷರಾಗಿ ಸಿ.ಸಿ. ನರೇಶ್ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಶ್ರೀಕಾಂತ್ ಎಲೆಕ್ಟ್ರಿಕಲ್ಸ್ನ ಪುಟ್ಟಸ್ವಾಮಿ, ಖಜಾಂಚಿಯಾಗಿ ಎಂ.ಕೆ. ಗುರುಕುಮಾರ್, ನಿಕಟಪೂರ್ವ ಅಧ್ಯಕ್ಷರಾಗಿ ಎನ್.ಡಿ. ಶ್ರೀನಿವಾಸಪ್ರಸಾದ್, ಉಪಾಧ್ಯಕ್ಷರಾಗಿ ಸಿ. ಚೆನ್ನಕೇಶ್ವರ, ಸದಸ್ಯತ್ವ ಸಮಿತಿ ಅಧ್ಯಕ್ಷ ಮಾಲತೇಶ ಜೋಶಿ, ಟೇಮರ್ ಆಗಿ ಎಸ್.ಎ. ಸುಧೀರ್ಕುಮಾರ್, ಟೇಲ್ ಟ್ವಿಸ್ಟರ್ ಆಗಿ ಗಣೇಶ್ಬಾಬು, ನಿರ್ದೇಶಕರಾಗಿ ರವೀಂದ್ರ ಜೋಶಿ, ಪ್ರೊ. ಎನ್. ವೆಂಕೋಬರಾವ್, ವಿನಯ್ಕುಮಾರ್, ವೆಂಕಟೇಶ್, ಡಾ. ಅನಿಲ್ಕುಮಾರ್, ಡಾ. ಸಿದ್ದೇಶ್ ಆರಾಧ್ಯಮಠ, ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.
ಜೂ. 9ರಂದು ನಗರದ ಕೋರಂ ಹೋಟೆಲ್ ಸಭಾಂಗಣದಲ್ಲಿ ನಡೆಯುವ ವೈಶಾಖ ಸಂಧ್ಯಾ ಪದಗ್ರಹಣ ಸಮಾರಂಭದಲ್ಲಿ ಮಾಜಿ ಜಿಲ್ಲಾ ರಾಜ್ಯಪಾಲ ಸಿ.ಎ. ಮುತ್ತಣ್ಣ ದೀಕ್ಷೆ ಬೋಧಿಸುವರು. 2013-14ನೇ ಸಾಲಿನಲ್ಲಿ ಈಗಾಗಲೇ ಪ್ರಾರಂಭಗೊಂಡ ಸಸ್ಯಾಭಿಯಾನವನ್ನು ಮೈಸೂರಿನ ಎಲ್ಲಾ ಬಡಾವಣೆಗಳ ಉದ್ಯಾನವನಗಳಿಗೆ ವಿಸ್ತರಿಸಲಾಗುವುದು ಎಂದು ಸ್ಥಾಪಕ ಅಧ್ಯಕ್ಷ ರವೀಂದ್ರ ಜೋಶಿ ತಿಳಿಸಿದ್ದಾರೆ.