ಇಂದು ಡೆಂಘೀ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ
ಮೈಸೂರು: ಕೋಲಂಬಿಯಾ ಏಷ್ಯಾ ಆಸ್ಪತ್ರೆಯು ಡೆಂಘೀ ಕಾಯಿಲೆಗೆ ಚಿಕಿತ್ಸೆ ನೀಡುವ ಸಲುವಾಗಿ ವಿಶೇಷ ಕ್ಲಿನಿಕ್ ಅನ್ನು ಜೂ. 9 ರಿಂದ ಆರಂಭಿಸಲಿದೆ. ಡೆಂಘೀ ತಪಾಸಣೆ ಕ್ಲಿಸಿಕ್ನಲ್ಲಿ ವಿಶೇಷ ಪ್ಯಾಕೇಜ್ ಇದ್ದು, 500ಕ್ಕೆ ಸಂಪೂರ್ಣ ರಕ್ತ ಪರೀಕ್ಷೆ, ಡೆಂಘೀ ರ್ಯಾಪಿಡ್ ಸ್ಕ್ರೀನಿಂಗ್ ಟೆಸ್ಟ್ ಮತ್ತು ಸಲಹೆ ನೀಡಲಾಗುತ್ತದೆ. ಅಲ್ಲದೆ, ವೈದ್ಯಕೀಯ ನೆರವನ್ನು ಕೂಡಾ ನೀಡಲಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ತಕ್ಷಣ ಬರುವ ಜ್ವರ, ತಲೆನೋವು, ಕಣ್ಣಿನ ಹಿಂಬದಿ ನೋವು, ಮಂಡಿ ಮತ್ತು ಸಂಧಿನೋವು, ವಾಂತಿ, ಚರ್ಮ ತುರಿಕೆ ಇವುಗಳನ್ನು ಪರಿಶೀಲಿಸಲಾಗುತ್ತದೆ. ಮನುಷ್ಯನ ಸಾವಿಗೆ ಕಾರಣವಾಗುವ ಡೆಂಘೀ ಹ್ಯಾಮರೇಜ್ ಫೀವರ್ ಮತ್ತು ಡೆಂಘೀ ಶಾಕ್ ಸಿಂಡ್ರೋಮ್ ಸಾಧ್ಯತೆಗಳಿರುವುದರಿಂದ ಮುನ್ನೆಚರಿಕೆ ಕ್ರಮವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ ಎಂದಿದ್ದಾರೆ. ಜೂ. 11ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ಮಾಹಿತಿಗೆ 0821 3989896 ಸಂಪರ್ಕಿಸಬಹುದು.