ಉಸ್ತುವಾರಿ ಸಚಿವರಿಗೆ ಮನವಿಗಳ ಮಹಾಪೂರ
ಕ.ಪ್ರ.ವಾರ್ತೆ ನಂಜನಗೂಡು ಜೂ. 8
ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರಥಮ ಬಾರಿಗೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಶ್ರೀನಿವಾಸಪ್ರಸಾದ್, ಸಾರ್ವಜನಿಕರಿಂದ ನೂರಾರು ಅರ್ಜಿ ಸ್ವೀಕರಿಸಿ, ಅರ್ಜಿದಾರರ ಆಶೋತ್ತರ ಈಡೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
1,704 ಸರ್ವೇಯರ್ ಹುದ್ದೆಗಳಿಗೆ ನೇಮಕಾತಿಯಾಗಿರುವ ಅಭ್ಯರ್ಥಿಗಳನ್ನು ಯಾವುದೆ ಕಾರಣಕ್ಕೂ ವಜಾಗೊಳಿಸುವುದಿಲ್ಲ ಎಂದು ಭರವಸೆ ನೀಡಿ, ಯಾರೂ ಧೃತಿಗೆಡಬಾರದು, ಜೂ. 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಇಲಾಖಾ ಮುಖ್ಯಸ್ಥರ ಸಭೆ ಕರೆಯಲಾಗಿದ್ದು, ಆಯ್ಕೆಯಾಗಿರುವ ಸರ್ವೆಯರ್ಗಳ ಸಂಬಂಧ ಚರ್ಚಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಕೆ.ಎಸ್. ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ಕೆಪಿಸಿಸಿ ಸದಸ್ಯ ಕೆ.ಆರ್. ಮೋಹನಕುಮಾರ್, ಯು.ಎನ್. ಪದ್ಮನಾಭರಾವ್, ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಜಿಲ್ಲಾ ಕಾನೂನು ಕಾಂಗ್ರೆಸ್ ಘಟಕದ ಅಧ್ಯಕ್ಷ ಎಸ್. ರಾಚಪ್ಪ ಇದ್ದರು.