ಚಿಕ್ಕಣ್ಣಗೆ ಎಂಎಲ್ಸಿ ಸ್ಥಾನ ಕೊಡಿ
ಎಚ್.ಡಿ. ಕೋಟೆ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಮಾಜಿ ಶಾಸಕ ಚಿಕ್ಕಣ್ಣ ಅವರನ್ನು ವಿಧಾನ ಪರಿಷತ್ತಿಗೆ ನೇಮಿಸುವಂತೆ ಅಖಿಲ ಕರ್ನಾಟಕ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿದೆ. ಜಿಲ್ಲಾದ್ಯಂತ ಸಮಾಜದ ಅಭಿವೃದ್ಧಿಗೆ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ವೇದಿಕೆಯ ರಾಜ್ಯ ಉಪಾಧ್ಯಕ್ಷ ಚೆನ್ನಾಪ್ಪಾಜಿ ನಾಯಕ ತಿಳಿಸಿದ್ದಾರೆ.